HEALTH TIPS

ಸೆಕೆಂಡ್‌ಹ್ಯಾಂಡ್ ಲ್ಯಾಪ್‌ಟಾಪ್‌ ಖರೀದಿಸುವಾಗ ಹೀಗೆ ಪರಿಶೀಲಿಸಿದರೆ ಹಣ ಉಳಿಸಬಹುದು

ಹೊಸ ಲ್ಯಾಪ್‌ಟಾಪ್‌ ಖರೀದಿಸಲು ಮನಸ್ಸಿಲ್ಲದವರು, ಕೆಲವೊಮ್ಮೆ ಈಗಾಗಲೇ ಬಳಸಿದ ಅಥವಾ ರಿಫರ್ಬಿಷ್ಡ್‌ ಲ್ಯಾಪ್‌ಟಾಪ್ ಖರೀದಿಸುವುದು ಸಾಮಾನ್ಯ. ಇಂಥ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಮುನ್ನ ಅದರ ಕಾರ್ಯಕ್ಷಮತೆ ಪರಿಶೀಲನೆಗೆ ಇಲ್ಲಿವೆ ಸರಳ ಮಾರ್ಗಗಳು.

ಬ್ಯಾಟರಿಯ ಕಾರ್ಯಕ್ಷಮತೆ ಪರಿಶೀನೆ:

ಲ್ಯಾಪ್‌ಟಾಪ್‌ನಲ್ಲಿ ಕಮ್ಯಾಂಡ್ ಪ್ರಾಂಪ್ಟ್ ಆಯ್ಕೆ ಮಾಡಿ, C:\Users\jashw>powercfg/batteryreport ಈ ಕಮ್ಯಾಂಡ್ ಸೇರಿಸಿ ಎಂಟರ್‌ ಕೊಡಿ. ಬಳಿಕ ಬ್ಯಾಟರಿ ರಿಪೋರ್ಟ್ ಲಭ್ಯವಾಗುತ್ತದೆ. ಬ್ಯಾಟರಿ ಚಾರ್ಚ್‌ನ ಸಾಮರ್ಥ್ಯ ಶೇ 50ಕ್ಕಿಂತ ಕಡಿಮೆ ಇದ್ದರೆ, ಬ್ಯಾಟರಿ ಹಾಳಾಗಿದೆ ಎಂದು ಅರ್ಥ.

ram ಮತ್ತು ಹಾರ್ಡವೇರ್ ಪರಿಶೀಲನೆ

ಲ್ಯಾಪ್‌ಟಾಪ್‌ನ ಸರ್ಚ್‌ನಲ್ಲಿ 'windows memory Diagnostic' ಎಂದು ಹುಡುಕಿ, ಎಂಟರ್‌ ಮಾಡಿದರೆ ಲ್ಯಾಪ್‌ಟಾಪ್‌ನಲ್ಲಿ ಯಾವುದೇ ಸಮಸ್ಯೆ ಇದ್ದರೂ ತೋರಿಸುತ್ತದೆ. ಇದರ ಜತೆಗೆ ಹಾರ್ಡವೇರ್‌ ಸಾಮರ್ಥ್ಯದ ಪರಿಶೀಲನೆಗಾಗಿ 'CrystalDiskInfo' ಡೌನ್‌ಲೋಡ್‌ ಮಾಡಿ.

ಡೆಡ್ ಪಿಕ್ಸಲ್ ಗಮನಿಸಿ

ಲ್ಯಾಪ್‌ಟಾಪ್‌ನ ಸ್ಕ್ರೀನ್‌ನಲ್ಲಿ ಡೆಡ್ ಪಿಕ್ಸಲ್ (ಕಪ್ಪು ಚುಕ್ಕೆ) ಇದೆಯೇ ಎಂಬುದನ್ನು ಪರಿಶೀಲಿಸಲು ಹಸಿರು ಅಥವಾ ಬಿಳಿ ಬಣ್ಣದ ಡೆಸ್ಕ್‌ಟಾಪ್‌ ವಾಲ್ ಪೇಪರ್ ಸೇಟ್ ಮಾಡಿ. ಒಂದು ವೇಳೆ ಸ್ಕ್ರೀನ್‌ನಲ್ಲಿ ಡೆಡ್ ಪಿಕ್ಸಲ್ ಇದ್ದರೆ ಕಪ್ಪು ಬಣ್ಣದಿಂದ ಕಾಣುತ್ತದೆ.

ಕೀಲಿಮಣಿ ಮತ್ತು ಯುಎಸ್‌ಬಿ ಪೋರ್ಟ್‌ಗಳ ಪರಿಶೀಲನೆ

ಲ್ಯಾಪ್‌ಟಾಪ್‌ನಲ್ಲಿರುವ ಎಲ್ಲ ಕೀಲಿಗಳು ಕೆಲಸ ಮಾಡುತ್ತಿವೆಯೇ ಎಂಬುದನ್ನು ಸ್ವತಃ ಕೀಲಿಮಣೆಯಲ್ಲಿರುವ ಗುಂಡಿಗಳನ್ನು ಒತ್ತುವ ಮೂಲಕ ಪರಿಶೀಲಿಸಿ. ಬಳಿಕ ಚಾರ್ಚಿಂಗ್‌ ಸೇರಿದಂತೆ ಇತರೆ ಔಟ್‌ಪುಟ್‌, ಇನ್‌ಪುಟ್ ಯುಎಸ್‌ಬಿ ಪೋರ್ಟ್‌ಗಳು ಸರಿಯಾಗಿವೆಯೇ ಎಂದು ಖಾತರಿ ಪಡಿಸಿಕೊಳ್ಳಿ.

ಓವರ್‌ ಹಿಟಿಂಗ್ ಸಮಸ್ಯೆ

ಲ್ಯಾಪ್‌ಟಾಪ್‌ನಲ್ಲಿ 'HWMONITOR | Softwares' ಡೌನ್‌ಲೋಡ್‌ ಮಾಡಿ. ಯಾವುದಾದರು ಒಂದು ಸಾಫ್ಟ್‌ವೇರ್‌ ಬಳಸಿದರೆ, ಈ ಸಾಫ್ಟ್‌ವೇರ್‌ ಮೂಲಕ ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತಿದೆಯೇ ಎಂಬುದನ್ನು ತಿಳಿಯಬಹುದಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries