HEALTH TIPS

ಮಂಜೇಶ್ವರ ಶಾಸಕರ ಅನಾಸ್ಥೆಯಿಂದ ಮಲಯಾಳಂ ಕಡ್ಡಾಯವಾಗಿದೆ -ಕೆ ಸುರೇಂದ್ರನ್

ಮಂಜೇಶ್ವರ : ಕೇರಳದಲ್ಲಿ ಎಡರಂಗ ಸರ್ಕಾರ ಭಾಷಾ ಮಸೂದೆ ಜಾರಿಗೆ ತಂದು ಮಲಯಾಳಂ ಕಡ್ಡಾಯ ಗೊಳಿಸಿರುವುದರಿಂದ ಇನ್ನು ರಾಜ್ಯದ ಶಾಲೆಗಳಲ್ಲಿ ಕಡ್ಡಾಯ ಮಲಯಾಳಂ ಕಲಿಕೆ ಜಾರಿಯಾಗಲಿದೆ ಹಾಗೂ ಪಿ ಎಸ್ ಸಿ ಪರೀಕ್ಷೆ ಮಲಯಾಳಂ ಕಡ್ಡಾಯವಾಗುವುದರಿಂದ ಭಾಷಾ ಅಲ್ಪ ಸಂಖ್ಯಾಕರಿಗೆ ಹಾಗೂ ಗಡಿನಾಡು ಕನ್ನಡಿಗರಿಗೆ ಅನ್ಯಾಯವಾಗಲಿದೆ. ಸರ್ಕಾರಿ ಉದ್ಯೋಗವು ಗಡಿನಾಡ ಕನ್ನಡಿಗರಿಗೆ ಮರೀಚಿಕೆಯಾಗಲಿದೆ.
ವಿಧಾನಸಭೆಯಲ್ಲಿ ಭಾಷಾ ಮಸೂದೆ ಮಂಡನೆ ಆಗುವಾಗ  ಸಭೆಗೆ ಗೈರು ಹಾಜರಾಗಿದ್ದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ರ ಬೇಜವಾಬ್ದಾರಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದರು.
ವಿಧಾನ ಸಭೆಯಲ್ಲಿ ಗೈರು ಆಗಿದ್ದು ಮಾತ್ರವಲ್ಲ ನಂನಂತರ ದಿನಗಳಲ್ಲಿಯೂ  ಮಾತನಾಡುವ ಅವಕಾಶ ಇದ್ದಾಗ ಕನ್ನಡ ಪರವಾಗಿ ಮಾತನಾಡದೆ ಸರ್ಕಾರದ ಕಡ್ಡಾಯ ಮಲಯಾಳಂ ಭಾಷಾ ಮಸೂದೆ ವಿರೋಧಿಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಕನ್ನಡ ವಿರೋಧಿ ನೀತಿಗೆ ಕನ್ನಡಿಗರು ಉತ್ತರ ನೀಡಬೇಕಿದೆ ಎಂದು ಸುರೇಂದ್ರನ್ ಕರೆ ನೀಡಿದರು.
ಮಂಜೇಶ್ವರ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮಣಿಕಂಠ ರೈ ವಿಜಯ್ ರೈ, ಎ.ಕೆ. ಕಯ್ಯಾರ್,ಸುನಿಲ್ ಅನಂತಪುರ, ವಸಂತ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries