ಸ್ಟಾಕ್‌ಹೋಮ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ನಾರ್ವೆಯ ರಾಜಕುಮಾರ ಅವರ ಪತ್ನಿ ನಿಕಟ ಸಂಪರ್ಕ ಹೊಂದಿದ್ದರು ಎಂಬುದು ಸೇರಿ ಅಂಶಗಳಿರುವ ದಾಖಲೆಗಳು ಬಿಡುಗಡೆಯಾಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
'ನಾರ್ವೆಯ ಉತ್ತರಾಧಿಕಾರಿ ಹಾಕೂನ್ ಅವರ ಪತ್ನಿ ಮೆಟ್ಟೆ ಮ್ಯಾರಿಟ್ ಅವರು ಹಲವು ವರ್ಷಗಳಿಂದ ಎಪ್‌ಸ್ಟೈನ್ ಜೊತೆ ನಿಕಟ ಸಂಪರ್ಕದಲ್ಲಿದ್ದರು.
ಅವರ ಜೊತೆ ಇ-ಮೇಲ್ ಸಂಭಾಷಣೆಯನ್ನು ನಡೆಸಿದ್ದಾರೆ. 2013ರಲ್ಲಿ ಎಪ್‌ಸ್ಟೈನ್ ಜೊತೆ ಬೀಚ್ ಹೌಸ್‌ನಲ್ಲಿ ನಾಲ್ಕು ದಿನ ತಂಗಿದ್ದರು' ಎಂಬ ವಿಚಾರಗಳು ದಾಖಲೆಗಳಲ್ಲಿ ಇವೆ. ಇದರ ಬೆನ್ನಲ್ಲೇ, ಮ್ಯಾರಿಟ್ ಅವರು ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.
ವಿದೇಶಾಂಗ ಸಚಿವಾಲಯವು ಎಪ್‌ಸ್ಟೈನ್ ಜೊತೆ ನಂಟು ಹೊಂದಿರುವ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ನಾರ್ವೆ ಸಂಸತ್ತು ಆದೇಶಿಸಿದೆ.
ಎಪ್‌ಸ್ಟೈನ್ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ಈಗಾಗಲೇ ನಾರ್ವೆಯ ಪ್ರಮುಖ ರಾಜಕೀಯ ನಾಯಕರು, ಹಿರಿಯ ರಾಜತಾಂತ್ರಿಕರ ತಲೆದಂಡವಾಗಿದೆ.

