HEALTH TIPS

ನೇಪಾಳದಲ್ಲಿ ಬಲೇಂದ್ರ ಶಾ ಹವಾ : ಭರ್ಜರಿ ಗೆಲುವಿನೆಡೆಗೆ ಆರ್‌ಎಸ್‌ಪಿ

ನವದೆಹಲಿ: ನೇಪಾಳದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ರ್ಯಾಪರ್-ರಾಜಕಾರಣಿ ಬಲೇಂದ್ರ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ದಾಪುಗಾಲಿಡುತ್ತಿದೆ.

ಚುನಾವಣೆ ನಡೆದ ನೇಪಾಳ ಸಂಸತ್‌ನ 275 ಸ್ಥಾನಗಳ ಪೈಕಿ ಆರ್‌ಎಸ್‌ಪಿ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಮುಖ ಪಕ್ಷವಾದ ನೇಪಾಳ ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಸಿಪಿಎನ್-ಯುಎಂಎಲ್ 10 ಹಾಗೂ ಕೆ.ಪಿ.ಶರ್ಮಾ ಒಲಿ ನೇತೃತ್ವದ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾರ್ಕ್ಸಿಸ್ಟ್-ಲೆನಿನಿಸ್ಟ್) 8 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಉಳಿದ ಕ್ಷೇತ್ರಗಳ ವಿವರ ಇನ್ನಷ್ಟೇ ಪ್ರಕಟವಾಗಬೇಕಿದೆ. ಬಹುಮತಕ್ಕೆ 138 ಸ್ಥಾನಗಳ ಅಗತ್ಯವಿದೆ.

ನೇಪಾಳದ ಭಾವೀ ಪ್ರಧಾನಿ ಅಭ್ಯರ್ಥಿಯೆಂದೇ ಬಿಂಬಿಸಲ್ಪಟ್ಟಿರುವ ಶಾ ಅವರು ಝಾಪಾ-5 ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಒಲಿ ಅವರಿಗಿಂತ 7 ಸಾವಿರಕ್ಕೂ ಅಧಿಕ ಮತಗಳಿಂದ ಮುಂದಿದ್ದಾರೆ.

ಆರ್‌ಎಸ್‌ಪಿಯ ಇತರ ಪ್ರಮುಖ ನಾಯಕರಾದ ಬಿರಾಜ್ ಭಕ್ತ ಶ್ರೇಷ್ಠ, ರಂಜು ದರ್ಶನಾ ಹಾಗೂ ಗಣೇಶ್ ಪಾರಾಜುಲಿ ಎದುರಾಳಿ ಅಭ್ಯರ್ಥಿಗಳ ಎದುರು ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

2022ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಪಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲೇ ಭಾರೀ ಬೆಂಬಲ ವ್ಯಕ್ತವಾಗಿತ್ತು. ಕಳೆದ ವರ್ಷ ನೇಪಾಳದಲ್ಲಿ ಭ್ರಷ್ಟಾಚಾರದ ವಿರುದ್ಧ ಭುಗಿಲೆದ್ದ ಜೆನ್‌ಝೀ ಪ್ರತಿಭಟನೆಯು, ಕೆ.ಪಿ.ಶರ್ಮಾ ಒಲಿ ನೇತೃತ್ವದ ನೇಪಾಳಿ ಕಾಂಗ್ರೆಸ್ ಹಾಗೂ ಸಿಪಿಎನ್ (ಯುಎಂಎಲ್) ಮೈತ್ರಿ ಸರಕಾರವನ್ನು ಪತನ ಹಾಗೂ ಸಂಸತ್‌ನ ವಿಸರ್ಜನೆಗೆ ಕಾರಣವಾಗಿತ್ತು.

ರ್ಯಾಪ್ ಹಾಡುಗಳ ಮೂಲಕ ನೇಪಾಳದಲ್ಲಿ ಜನಪ್ರಿಯರಾಗಿದ್ದ 35 ವರ್ಷ ವಯಸ್ಸಿನ ಬಲೇಂದ್ರ ಕಠ್ಮಂಡು ಮೇಯರ್ ಆಗುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries