HEALTH TIPS

ಲಷ್ಕರ್-ಎ-ತಯಬಾದ ಶಂಕಿತ ಲಷ್ಕರ್ ಉಗ್ರನ ಬಂಧನ

ನವದೆಹಲಿ: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯಬಾದ (ಎಲ್‌ಇಟಿ) ಶಂಕಿತ ಹ್ಯಾಂಡ್ಲರ್‌ ಶಬೀರ್‌ ಅಹ್ಮದ್‌ ಲೋನ್‌ ಎಂಬಾತನನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಉತ್ತರ ಪ್ರದೇಶದ ಘಾಜಿಪುರದಲ್ಲಿ ಭಾನುವಾರ ರಾತ್ರಿ ಬಂಧಿಸಿದೆ. 

'ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳೊಂದಿಗೆ ಶಬೀರ್‌ ಸಂಪರ್ಕದಲ್ಲಿದ್ದಾನೆ.

ಎಲ್‌ಇಟಿಯಿಂದ ದೊಡ್ಡಮಟ್ಟದ ಭಯೋತ್ಪಾದನಾ ತರಬೇತಿ ಪಡೆದಿದ್ದಾನೆ. ದೆಹಲಿ ಮತ್ತು ಕೋಲ್ಕತ್ತದ ಹಲವು ಸ್ಥಳಗಳಲ್ಲಿ ಪಾಕಿಸ್ತಾನ ಪರ ಹಾಗೂ ಭಾರತ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸುವ ಕೃತ್ಯದಲ್ಲೂ ಭಾಗಿಯಾಗಿದ್ದಾನೆ' ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

'ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನಿವಾಸಿಯಾಗಿರುವ ಶಬೀರ್‌ನನ್ನು, ರಾಜಾ ಹಾಗೂ ಕಾಶ್ಮೀರಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇತ್ತೀಚೆಗೆ ಪತ್ತೆಯಾದ ಮೆಟ್ರೊ ಪೋಸ್ಟರ್‌ ಎಲ್‌ಇಟಿ ಜಾಲಕ್ಕೆ ಸಂಬಂಧಿಸಿದಂತೆ ಲೋನ್‌ ಬೇಕಾಗಿದ್ದ' ಎಂದು ಹೇಳಿದರು.

ಐಎಸ್‌ಐ ಆಣತಿಯಂತೆ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು. ವಿದೇಶ ಮತ್ತು ಭಾರತದಲ್ಲಿರುವ ಹ್ಯಾಂಡ್ಲರ್‌ಗಳ ಮಧ್ಯವರ್ತಿಯಾಗಿ ಶಬೀರ್ ಕೆಲಸ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.

ಬಂಧನದ ವೇಳೆ ಶಬೀರ್‌ ಬಳಿ ಇದ್ದ ಹಲವು ವಿದೇಶಿ ಕರೆನ್ಸಿಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ಭಾರತೀಯ ಕರೆನ್ಸಿ ಹಾಗೂ ನೇಪಾಳದ ಸಿಮ್‌ ಕಾರ್ಡ್‌ ಪತ್ತೆಯಾಗಿವೆ.

ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಬೀರ್‌ ಭಾಗಿಯಾಗಿದ್ದಾನೆ. 2007 ಮತ್ತು 2015ರಲ್ಲಿ ಈತನನ್ನು ಬಂಧಿಸಲಾಗಿತ್ತು. ಬಿಡುಗಡೆ ಬಳಿಕ ಈತ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದ ಎಂದೂ ತಿಳಿಸಿದರು.

ದೇಶದಾದ್ಯಂತ ಎಲ್‌ಇಟಿ ಜಾಲ ಭೇದಿಸಿದ್ದ ಪೊಲೀಸರು, ಬಾಂಗ್ಲಾದೇಶದ ಏಳು ಪ್ರಜೆಗಳು ಸೇರಿದಂತೆ ಎಂಟು ಮಂದಿಯನ್ನು ಫೆ.22ರಂದು ಬಂಧಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries