HEALTH TIPS

ದೂರವಾಣಿ ಮೂಲಕ ಟ್ರಂಪ್ ಜೊತೆ ಚರ್ಚೆ: ಯುದ್ಧ ಬೇಗ ಅಂತ್ಯಗೊಳಿಸಲು ಪುಟಿನ್ ಪ್ರಸ್ತಾವ

ಮಾಸ್ಕೊ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ಸಂದರ್ಭ ಪುಟಿನ್, ಬೇಗ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ಬಳಿ ಕೆಲವು ಪ್ರಸ್ತಾವನೆಗಳನ್ನು ಇಟ್ಟಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಾರ್ಯಾಲಯ ಕ್ರೆಮ್ಲಿನ್ ತಿಳಿಸಿದೆ.

ಅಮೆರಿಕದಿಂದಲೇ ಕರೆ ಬಂದಿತ್ತು. ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆದಿದೆ. ಉಭಯ ನಾಯಕರು ನಿರ್ದಿಷ್ಟ ಮತ್ತು ರಚನಾತ್ಮಕ ಚರ್ಚೆ ನಡೆಸಿದ್ದಾರೆ ಎಂದು ಪುಟಿನ್ ಅವರ ವಿದೇಶ ವ್ಯವಹಾರಗಳ ಸಲಹೆಗಾರರಾದ ಯುರಿ ಉಶಕೋವ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದ ಸಶಸ್ತ್ರ ಸಂಘರ್ಷವನ್ನು ಶೀಘ್ರ ಕೊನೆಗೊಳಿಸಲು ರಾಜಕೀಯ ಮತ್ತು ರಾಜತಾಂತ್ರಿಕ ಒಮ್ಮತಕ್ಕೆ ಗಲ್ಫ್ ನಾಯಕರು ಮತ್ತು ಇರಾನ್ ಆಧ್ಯಕ್ಷರ ಜೊತೆ ತಾವು ನಡೆಸಿದ ಸಂಭಾಷಣೆಯ ಕೆಲವು ಪ್ರಸ್ತಾವನೆಗಳನ್ನು ಪುಟಿನ್, ಟ್ರಂಪ್ ಮುಂದೆ ಇಟ್ಟಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.

ಸದ್ಯದ ಬೆಳವಣಿಗೆಯ ಪರಾಮರ್ಶೆ ನಡೆಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ ಎಂದು ಉಶಕೋವ್ ತಿಳಿಸಿದ್ಧಾರೆ.

ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಿಂದ ರಷ್ಯಾ ಮಿತ್ರ ದೇಶ ಇರಾನ್ ಗಮನಾರ್ಹ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ.

ಉಕ್ರೇನ್ ಯುದ್ಧದ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಉಶಕೋವ್ ತಿಳಿಸಿದ್ದಾರೆ.

ಇರಾನ್‌ ಜೊತೆಗಿನ ಸಂಘರ್ಷದ ಪರಿಸ್ಥಿತಿ ಮತ್ತು ಉಕ್ರೇನ್ ಯುದ್ಧದ ವಿಷಯ ಇತ್ಯರ್ಥಪಡಿಸುವ ಕುರಿತು ಅಮೆರಿಕದ ಪ್ರತಿನಿಧಿಗಳೊಂದಿಗೆ ನಡೆಯುತ್ತಿರುವ ದ್ವಿಪಕ್ಷೀಯ ಮಾತುಕತೆಗಳ ಮೇಲೆ ಗಮನ ಹರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪಡೆಗಳು ಮೇಲುಗೈ ಸಾಧಿಸಿರುವ ಮಾಹಿತಿಯನ್ನು ಪುಟಿನ್ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಿಂದ ಟ್ರಂಪ್ ಮತ್ತು ಪುಟಿನ್ ನಡೆಸಿದ ಮೊದಲ ಮಾತುಕತೆ ಇದಾಗಿದ್ದು, ವೆನೆಜುವೆಲಾ ಮತ್ತು ಜಾಗತಿಕ ತೈಲ ಸರಬರಾಜಿಗೆ ಅಡೆತಡೆ ಕುರಿತಂತೆಯೂ ಮಾತುಕತೆ ನಡೆದಿದೆ ಎಂದು ಕ್ರೆಮ್ಲಿನ್ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries