HEALTH TIPS

ಮಹಿಳಾ ದಿನಾಚರಣೆ; ಮಹಿಳೆಯರ ನಿಯಂತ್ರಣದಲ್ಲಿ ತ್ರಿಶೂರ್ ರೈಲು ನಿಲ್ದಾಣ

ತ್ರಿಶೂರ್: ಮಹಿಳಾ ದಿನದಂದು ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತ್ರಿಶೂರ್ ರೈಲು ನಿಲ್ದಾಣದ ಮಹಿಳಾ ಉದ್ಯೋಗಿಗಳು ಸಂತೋಷಪಟ್ಟರು. 


ಹಗಲಿನ ಪಾಳಿಯಲ್ಲಿ ಹೆಚ್ಚಿನ ಜನರು ಒಟ್ಟಿಗೆ ಕೆಲಸ ಮಾಡುವುದು ಅಪರೂಪ. ನಿಲ್ದಾಣದ ಸೂಪರಿಂಟೆಂಡೆಂಟ್ ಕೆ. ಜಯಶ್ರೀ, ಎಸ್. ಗೀತಾ, ಕೆ. ದಿವ್ಯಾ, ರಿಸರ್ವೇಶನ್ ಮತ್ತು ಬುಕಿಂಗ್ ಕಚೇರಿಯ ವಿ. ಸೋನಾ, ಮಾಹಿತಿ ಕೇಂದ್ರದ ಎಂ. ಸೋನಿಮಾ, ಪಾರ್ಸೆಲ್ ಕಚೇರಿಯ ರೋಹಿಣಿ ಆರ್. ಮೆನನ್ ಮತ್ತು ಎ. ವಿದ್ಯಾ ಸೇರಿದಂತೆ 16 ಮಹಿಳೆಯರು, ಆರ್‍ಪಿಎಫ್‍ನ ಮೂವರು ಮತ್ತು ಆರು ಕ್ಲೀನರ್‍ಗಳು ಮಹಿಳಾ ದಿನದಂದು ಜೊತೆಗೆ ಕಾರ್ಯನಿರ್ವಹಿಸಿದರು. 

ಇದು ಅವರು ಪ್ರತಿದಿನ ಮಾಡುವ ಕೆಲಸವಾದರೂ, ಅವರು ಮಹಿಳಾ ಉದ್ಯೋಗಿಯಾಗಿರುವುದಕ್ಕೆ ಹೆಮ್ಮೆಪಡುತ್ತಾರೆ ಎಂದು ನಿಲ್ದಾಣದ ಸೂಪರಿಂಟೆಂಡೆಂಟ್ ಕೆ. ಜಯಶ್ರೀ ಪ್ರತಿಕ್ರಿಯಿಸಿದರು. ಅವರು ಚೆರುತುರುತಿ ನಿವಾಸಿ.

ಯಾರನ್ನೂ ಅವಲಂಬಿಸದೆ ಕೆಲಸ ಮಾಡಿ ಬದುಕುವುದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ಪಾರ್ಸೆಲ್ ಕಚೇರಿಯ ಎ. ವಿದ್ಯಾ ಹೇಳಿದರು. ಆರ್‍ಪಿಎಫ್ ಅಧಿಕಾರಿ ಶ್ರುತಿ ಸತೀಶ್ ಕೂಡ ತಮ್ಮ ಕೆಲಸವು ಪುರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಮಾಡದ ಕೆಲಸವಾಗಿದೆ ಮತ್ತು ಮಹಿಳಾ ದಿನದಂದು ಅಂತಹ ಕಲ್ಪನೆ ಒಳ್ಳೆಯದು ಎಂದು ಹೇಳಿದರು.

ಮಹಿಳಾ ದಿನದಂದು ಎಲ್ಲಾ ಮಹಿಳೆಯರು ಒಂದೇ ಪಾಳಿಯಲ್ಲಿ ಕೆಲಸಕ್ಕೆ ಬರಬೇಕು ಎಂಬ ಕಲ್ಪನೆಯನ್ನು ನಿಲ್ದಾಣ ವ್ಯವಸ್ಥಾಪಕ ಸಿ.ಎಂ. ಫಿಲಿಪೆÇೀಸ್ ಹಂಚಿಕೊಂಡರು. ನೌಕರರೆಲ್ಲರೂ ಇದಕ್ಕೆ ಒಪ್ಪಿಕೊಂಡರು ಮತ್ತು ಉಪ ನಿಲ್ದಾಣ ವ್ಯವಸ್ಥಾಪಕ (ವಾಣಿಜ್ಯ) ಕೆ.ಆರ್. ರಾಮ್‍ಕುಮಾರ್ ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries