HEALTH TIPS

ಇರಾನ್‌ ವಿರುದ್ಧ ಇನ್ನಷ್ಟು ವಾರ ಯುದ್ಧ ಮುಂದುವರಿಸುವ ಇರಾದೆಯಲ್ಲಿರುವ ಟ್ರಂಪ್

ದುಬೈ: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಸೋಮವಾರವು ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಭೀಕರ ದಾಳಿ ಮಾಡುವುದನ್ನು ಮುಂದುವರಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಮತ್ತು ಅದರ ಮಿತ್ರಪಡೆಗಳು ಇಸ್ರೇಲ್, ಕುವೈತ್, ಯುಎಇ ಹಾಗೂ ಇಂಧನ ಉತ್ಪಾದನೆಯ ಪ್ರಮುಖ ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿವೆ.

'ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ. ಸಂಘರ್ಷವು ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರ್ಯಾಚರಣೆಗಳು ಇನ್ನೂ 4 ರಿಂದ 5 ವಾರಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ, ಆದರೆ ಅಮೆರಿಕವು ಅದಕ್ಕಿಂತಲೂ ಹೆಚ್ಚಿನ ಸಮಯದವರೆಗೆ ಹೋರಾಡಲು ಸಿದ್ಧವಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.

'ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸಲು, ಅದರ ನೌಕಾಪಡೆಯನ್ನು ಧ್ವಂಸಗೊಳಿಸಲು, ಆ ದೇಶವು ಪರಮಾಣು ಅಸ್ತ್ರಗಳನ್ನು ಪಡೆಯದಂತೆ ತಡೆಯಲು ಮತ್ತು ಹಿಜ್ಬುಲ್ಲಾದಂತಹ ಮಿತ್ರ ಸಂಘಟನೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಲು ಅಮೆರಿಕ ಪಡೆಗಳು ದೃಢನಿಶ್ಚಯ ಮಾಡಿದೆ' ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್‌ ಭದ್ರತಾ ಪಡೆಯ ಉನ್ನತ ಅಧಿಕಾರಿ ಅಲಿ ಲಾರಿಜಾನಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries