HEALTH TIPS

ದೇವರ ಹೆಸರಲ್ಲಿ ಯುದ್ಧ ಸಮರ್ಥಿಸಲಾಗದು: ಪೋಪ್‌

 ರೋಮ್‌:'ಜೀಸಸ್‌ ಶಾಂತಿಯ ಸಂಕೇತ. ಅವರು ಯಾವ ಯುದ್ಧವನ್ನೂ ಬೆಂಬಲಿಸುವುದಿಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲಾಗದು' ಎಂದು ಪೋಪ್‌ 14ನೇ ಲಿಯೊ ಹೇಳಿದ್ದಾರೆ.


'ಗರಿಗಳ ಭಾನುವಾರ' ಆಚರಣೆಯ ಅಂಗವಾಗಿ ವ್ಯಾಟಿಕನ್‌ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ಉದ್ದೇಶಿಸಿ ಸಂದೇಶ ನೀಡಿದ ಅವರು, 'ದೇವರು ಹಿಂಸೆಯನ್ನು ಒಪ್ಪುವುದಿಲ್ಲ, ಯುದ್ಧ ಮಾಡುವರ ಪ್ರಾರ್ಥನೆಯನ್ನೂ ಅವರು ಆಲಿಸುವುದಿಲ್ಲ, ಜೀಸಸ್‌, ತುಳಿತಕ್ಕೊಳಗಾದವರನ್ನು ಸಾಂತ್ವನಗೊಳಿಸುವ ದೇವರು.

ಯುದ್ಧವು ಮನುಕುಲದ ಘೋರ ದುರಂತ' ಎಂದು ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷವನ್ನು ಇಸ್ರೇಲ್‌, ಅಮೆರಿಕ, ಇರಾನ್‌ನ ಮುಖಂಡರು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ. 'ಮಿಲಿಟರಿ ಶಕ್ತಿಯಿಂದ ತನ್ನ ಶತ್ರುರಾಷ್ಟ್ರವನ್ನು ಮಣಿಸಲು ಪ್ರಯತ್ನಿಸುತ್ತಿರುವ ಕ್ರಿಶ್ಚಿಯನ್‌ ರಾಷ್ಟ್ರ ಅಮೆರಿಕ' ಎಂದು ಅಲ್ಲಿನ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್‌ ಹೇಳಿದ್ದಾರೆ. ರಷ್ಯಾದ ಆರ್ಥೊಡೆಕ್ಸ್‌ ಚರ್ಚ್‌ ಕೂಡ, ಉಕ್ರೇನ್‌ ವಿರುದ್ಧದ ಯುದ್ಧವನ್ನು 'ಪವಿತ್ರ ಯುದ್ಧ' ಎಂದು ಕರೆದಿದೆ.

ಶುಭ ಶುಕ್ರವಾರ ಮತ್ತು ಈಸ್ಟರ್‌ ಹಬ್ಬದ ಪೂರ್ವಭಾವಿಯಾಗಿ 'ಗರಿಗಳ ಭಾನುವಾರ' ಆಚರಣೆ ನಡೆಯುತ್ತದೆ. ಪೋಪ್‌ ಲಿಯೊ ಅವರು, ಯುದ್ಧದಿಂದಾಗಿ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಿಸುತ್ತಿರುವ ಕ್ರೈಸ್ತರಿಗಾಗಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

'ಯುದ್ಧದಿಂದಾಗಿ ಪ್ರಚಂದಾದ್ಯಂತ ಎಷ್ಟೊಂದು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಕ್ರೈಸ್ತರು ಮರೆಯಬಾರದು. ಯುದ್ಧ ಕೊನೆಗೊಳ್ಳಲು ದೇವರ ಬಳಿ ನಿಮ್ಮ ಪ್ರಾರ್ಥನೆ ಸಲ್ಲಿಸಿ' ಎಂದು ಅವರು ಮನವಿ ಮಾಡಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries