HEALTH TIPS

ಅಮೆರಿಕದಿಂದ ನಿರ್ಬಂಧ ಸಡಿಲ: ಇರಾನ್‌ ತೈಲ ಖರೀದಿಗೆ ಭಾರತದ ರಿಫೈನರಿಗಳು ಆಸಕ್ತಿ

 ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟನ್ನು ನೀಗಿಸಲು ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ ತೆರವುಗೊಳಿಸಿದ ಬೆನ್ನಲ್ಲೇ ಇರಾನ್ ತೈಲ ಖರೀದಿಸಲು ಭಾರತದ ತೈಲ ಸಂಸ್ಕರಣಾ ಘಟಕಗಳು ಆಸಕ್ತಿ ತೋರಿಸುತ್ತಿವೆ ಎಂದು ಮೂಲಗಳು ಮಾಹಿತಿ ನೀಡಿವೆ. 


ಭಾರತದ ಮೂರು ತೈಲ ಸಂಸ್ಕರಣಾ ಘಟಕಗಳು ತಾವು ಇರಾನ್ ತೈಲವನ್ನು ಖರೀದಿಸುವುದಾಗಿ ತಿಳಿಸಿವೆ.

ಆದರೆ, ಪಾವತಿ ನಿಯಮಗಳಂತಹ ವಿವರಗಳ ಬಗ್ಗೆ ಅಮೆರಿಕದ ಸ್ಪಷ್ಟನೆ ಮತ್ತು ಭಾರತ ಸರ್ಕಾರದ ನಿರ್ದೇಶನಗಳಿಗಾಗಿ ಕಾಯುತ್ತಿರುವುದಾಗಿ ಅವು ಹೇಳಿವೆ.

ಏಷ್ಯಾದ ಇತರ ರಾಷ್ಟ್ರಗಳ ತೈಲ ಸಂಸ್ಕರಣಾ ಘಟಕಗಳು ಕೂಡ ಇರಾನ್‌ ತೈಲವನ್ನು ಖರೀದಿಸಲು ಸಾಧ್ಯವೇ? ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ.

ಈಗಾಗಲೇ ಸಮುದ್ರದಲ್ಲಿರುವ ಇರಾನ್ ತೈಲದ ಖರೀದಿಗೆ 30 ದಿನಗಳ ವಿನಾಯಿತಿಯನ್ನು ನೀಡಿರುವುದಾಗಿ ಅಮೆರಿಕದ ಹಣಕಾಸು ಇಲಾಖೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಶುಕ್ರವಾರ ತಿಳಿಸಿದ್ದಾರೆ.

ಯುದ್ಧ ಆರಂಭವಾದ ನಂತರ ಅಮೆರಿಕವು ತೈಲದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries