HEALTH TIPS

ಹಗಲೂ ಉರಿಯುತ್ತಿರುವ ಬೀದಿ ದೀಪ: ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥದಿಂದ ಮಂಗಲ್ಪಾಡಿ ಪಂಚಾಯತ್‍ಗೆ ಆರ್ಥಿಕ ನಷ್ಟ

 ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಹಗಲು ಹೊತ್ತಲ್ಲೂ ಉರಿದು ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಸ್ಥಾಪಿಸಲಾದ ಲೋಮಾಸ್ಟ್ ಬೀದಿ ದೀಪಗಳು ಕಳೆದ ಒಂದು ತಿಂಗಳಿಂದ ರಾತ್ರಿ ಹಗಲು ಸತತವಾಗಿ ಉರಿಯುತ್ತಿದೆ. 



ಹಗಲು ಉರಿಯುತ್ತಿರುವ ದೀಪವನ್ನು ನಂದಿಸುವ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯುತ್ ಅನಗತ್ಯವಾಗಿ ವ್ಯರ್ಥವಾಗಿ ಹೋಗುತ್ತಿದೆ ಎಂದು ಇದರಿಂದ ಪಂಚಾಯತ್‌ಗೆ ಭಾರೀ ಪ್ರಮಾಣದ ಬಿಲ್ ಪಾವತಿಸಬೇಕಾಗಿ ಬರಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲೂ ಹಲವಾರು ಬೀದಿ ದೀಪಗಳು ಹಗಲು ಹೊತ್ತಲ್ಲೂ ಉರಿಯುತ್ತಿದೆ. ಈ ದೀಪಗಳನ್ನು ರಾತ್ರಿ ಸರಿಯಾಗಿ ಉರಿಸಿ ಹಗಲಲ್ಲಿ ನಂದಿಸುವಂತೆ ಮಾಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries