HEALTH TIPS

ಮುನಿಯೂರು ದೇವಸ್ಥಾನದಲ್ಲಿ ಅನುಜ್ಞಾ ಪ್ರಾರ್ಥನೆ

ಬದಿಯಡ್ಕ: ಕುಂಬ್ಡಾಜೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಪೂರ್ವಾಹ್ನ ಗಣಪತಿ ಹೋಮ, ಸಂಹಾರತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರೀ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರ ಪೂಜೆ, ಸಂಜೆ 7 ರಿಂದ ಬಿಂಬಶುದ್ಧಿ, ಕಲಶಾಭಿಷೇಕ, ಪೀಠಾಧಿವಾಸ, ಧ್ಯಾನಾಧಿವಾಸ, ಅವಾಸ ಹೋಮ, ಅವಾಸ ಬಲಿ, ತ್ರಿಕಾಲ ಪೂಜೆ, ಶಿರಸ್ತತ್ವ ಹೋಮ, ಪುಣ್ಯಾಹವಾಚ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮಹಾಪೂಜೆ ನಡೆಯಿತು. 


ಸಂಜೆ ಅಗಲ್ಪಾಡಿ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ಕಲಾತಪಸ್ವಿ ನಾಟ್ಯಗುರು ವಿದ್ವಾನ್ ಬಾಲಕೃಷ್ಣ ಮಾಸ್ತರ್ ನಾಟ್ಯನಿಲಯಂ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ಭರತನಾಟ್ಯ `ಕೃಷ್ಣಾಯಸ್ತುಭ್ಯಂ ನಮಃ' ಜನಮನಸೂರೆಗೊಂಡಿತು. 

ಶುಕ್ರವಾರ ಬೆಳಗ್ಗೆ 108 ತೆಂಗಿನಕಾಯಿ ಗಣಪತಿ ಹೋಮ, ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries