HEALTH TIPS

ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ದತ್ತಾ ಮೇಘೆ ನಿಧನ

 ನಾಗಪುರ: ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ದತ್ತಾ ರಘೋಬಾಜಿ ಮೇಘೆ(89) ಅವರು ಭಾನುವಾರ ನಿಧನರಾಗಿದ್ದಾರೆ ಎಂದು ಅವರ ನಿಕಟವರ್ತಿ ಮತ್ತು ನಾಗಪುರದ ಉಪಮೇಯರ್ ರಘುನಾಥ್ ಮಲ್ಲಿಕಾರ್ ಹೇಳಿದ್ದಾರೆ. 


ದತ್ತಾ ಮೇಘೆ ಅವರು ನಾಗಪುರ, ರಾಮ್ಟೆಕ್ ಮತ್ತು ವಾರ್ಧಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2002ರಿಂದ 2008ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.

ಶರಾದ್ ಪವಾರ್ ನೇತೃತ್ವದಲ್ಲಿ 1999ರಲ್ಲಿ ಎನ್‌ಸಿಪಿ ಪಕ್ಷ ಸ್ಥಾಪನೆಯಾದಾಗ, ದತ್ತಾ ಮೇಘೆ ಅವರು ಆ ಪಕ್ಷದಲ್ಲಿದ್ದರು. ಆಗ ರಾಜ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ದತ್ತಾ ಮೇಘೆ ಅವರು 2014ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರ ಮಕ್ಕಳಾದ ಸಂದೀಪ್ ಮೇಘೆ ಅವರು ಶಾಸಕರಾಗಿದ್ದರೆ, ಸಾಗರ್ ಮೇಘಡ ಮಾಜಿ ಎಂಎಲ್‌ಸಿ ಆಗಿದ್ದಾರೆ.

89 ವರ್ಷದ ದತ್ತಾ ಮೇಘೆ ಅವರು ಹೆಂಡತಿ, ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries