HEALTH TIPS

ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರಿಡುವ ಮಸೂದೆಗೆ ಫ್ಲೋರಿಡಾ ಗವರ್ನರ್ ಸಹಿ

ವಾಷಿಂಗ್ಟನ್: ಫ್ಲೋರಿಡಾದಲ್ಲಿರುವ ಪಾಮ್ ಬೀಚ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ಪ್ರೆಸಿಡೆಂಟ್ ಡೊನಾಲ್ಡ್‌ ಜೆ. ಟ್ರಂಪ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡುವ ಮಸೂದೆಗೆ ಅಲ್ಲಿನ ಗವರ್ನರ್ ರಾನ್ ಡೆಸಾಂಟಿಸ್ ಅವರು ಸೋಮವಾರ(ಮಾ.30) ಸಹಿ ಹಾಕಿದ್ದಾರೆ.

ವಿಮಾನ ನಿಲ್ದಾಣದ ಮರುನಾಮಕರಣ ಪ್ರಕ್ರಿಯೆ ಪೂರ್ಣಗೊಳ್ಳಲು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್(ಎಫ್‌ಎಎ) ಅನುಮತಿಯ ಅಗತ್ಯವಿದೆ.

'ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸುವುದು ಪ್ರಾದೇಶಿಕ ಸಮಸ್ಯೆಯಾಗಿದೆ. ವಿಮಾನ ನಿಲ್ದಾಣದ ಹೆಸರು ಮರುನಾಮಕರಣಕ್ಕೆ ಅನುಮೋದಿಸುವುದಿಲ್ಲ' ಎಂದು ಎಫ್‌ಎಎ ತಿಳಿಸಿದೆ.

ಆದರೆ, ವಿಮಾನ ನಿಲ್ದಾಣದ ಮರುನಾಮಕರಣ ಸಂದರ್ಭದಲ್ಲಿ ನ್ಯಾವಿಗೇಷನಲ್ ಚಾರ್ಟ್‌ಗಳು ಮತ್ತು ಡೇಟಾಬೇಸ್‌ಗಳನ್ನು ನವೀಕರಿಸುವುದನ್ನು ಒಳಗೊಂಡಂತೆ ಎಫ್‌ಎಎ ಕೆಲವು ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದೆ.

ಪಾಮ್ ಬೀಚ್ ವಿಮಾನ ನಿಲ್ದಾಣವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ರೆಸಾರ್ಟ್‌ನಿಂದ ಎರಡು ಮೈಲಿ ದೂರದಲ್ಲಿದೆ.

2025ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಸಂಸ್ಥೆಗಳ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಅಲ್ಲಿ ತಮ್ಮ ಹೆಸರನ್ನಿಡಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿರುವ ಜಾನ್‌ ಎಫ್‌. ಕೆನಡಿ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries