ಭಾರತೀಯ ಜನತಾ ಪಕ್ಷದ ಕೇರಳ ಘಟಕದ ಮುದ್ರೆಯನ್ನು ಹೊಂದಿರುವ ಚುನಾವಣಾ ಆಯೋಗದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಬಳಿಕ ವಿವಾದ ಭುಗಿಲೆದ್ದಿತ್ತು.
ಮಾರ್ಚ್ 21ರಂದು ಇಮೇಲ್ ಜೊತೆಗೆ ಪತ್ರವನ್ನು ಕಳುಹಿಸಲಾಗಿದೆ. ಸೋಮವಾರ ವಿಷಯ ಬೆಳಕಿಗೆ ಬಂದ ನಂತರ, ಚುನಾವಣಾ ಆಯೋಗವು "ಸಂಪೂರ್ಣವಾಗಿ ಸಿಬ್ಬಂದಿ ದೋಷ" ಎಂದು ಹೇಳಿತ್ತು.
ಕೇರಳ ಪೊಲೀಸರು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಐಟಿ ನಿಯಮಗಳ ಕೆಲವು ವಿಧಿಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಿಂದ ಪೋಸ್ಟ್‌ಗಳನ್ನು ತೆಗೆದುಹಾಕಲು ಸೂಚನೆ ನೀಡಿರುವುದಾಗಿ ಪತ್ರಕರ್ತರಾದ ಅರವಿಂದ್ ಗುಣಶೇಖರ್ ಮತ್ತು ಪಿಯೂಷ್ ರೈ ಹಾಗೂ ಕಾಂಗ್ರೆಸ್‌ನ ಆದಿತ್ಯ ಗೋಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

