HEALTH TIPS

ಮೆಕ್ಸಿಕೊ: ಟ್ರಕ್‌ನೊಳಗೆ 229 ವಲಸಿಗರ ಪತ್ತೆ

ಕ್ಸಲಾಪಾ: ಮೆಕ್ಸಿಕೊದ ಪೂರ್ವ ರಾಜ್ಯವಾದ ವೆರಾಕ್ರೂಜ್‌ ಮೂಲಕ ಪ್ರಯಾಣಿಸುತ್ತಿದ್ದ ಟ್ರಕ್‌ನೊಳಗೆ ಅಡಗಿದ್ದ 229 ವಲಸಿಗರನ್ನು ಮೆಕ್ಸಿಕೊದ ಅಧಿಕಾರಿಗಳು ಸೋಮವಾರ ಪತ್ತೆ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರ ವಹಿಸಿಕೊಂಡ ನಂತರ, ವಲಸೆಯ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಇದು ಸೂಚಿಸುತ್ತದೆ.

'ಪೊಲೀಸರು ವಶಕ್ಕೆ ಪಡೆದ ಟ್ರಕ್‌ ಅನ್ನು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಟ್ರಕ್‌ನೊಳಗಿದ್ದ ವಲಸಿಗರು ಸಹಾಯಕ್ಕಾಗಿ ಕೂಗತೊಡಗಿದಾಗ ಅವರು ಅಲ್ಲಿ ಸಿಲುಕಿರುವುದು ಗೊತ್ತಾಗಿದೆ. ಹೆಚ್ಚಿನ ವಲಸಿಗರು ಮಧ್ಯ ಅಮೆರಿಕದವರಾಗಿದ್ದು, ಅವರಲ್ಲಿ 17 ಮಂದಿ ಅಪ್ರಾಪ್ತರು ಮತ್ತು ಹಲವರು ನಿರ್ಜಲೀಕರಣದಿಂದ ಬಳಲುತ್ತಿದ್ದರು' ಎಂದು ರಾಜ್ಯದ ಸರ್ಕಾರದ ಉಪ ಕಾರ್ಯದರ್ಶಿ ಜೋಸ್‌ ಮ್ಯಾನುಯೆಲ್‌ ಪೋಜೋಸ್‌ ತಿಳಿಸಿದ್ದಾರೆ.

ಅಮೆರಿಕಕ್ಕೆ ತೆರಳಲು ವಲಸಿಗರು ಐತಿಹಾಸಿಕವಾಗಿ ಬಳಸುವ ಹಲವು ಮಾರ್ಗಗಳಲ್ಲಿ ವೆರಾಕ್ರೂಜ್‌ ಒಂದು. ಇಲ್ಲಿ ವಲಸಿಗರು ಅಕ್ರಮ ವಲಸೆಯನ್ನು ಬೆಂಬಲಿಸುವ ಸಂಘಟಿತ ಅಪರಾಧ ಗುಂಪುಗಳ ಕೈಗೆ ಸಿಲುಕಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅಧಿಕಾರಿಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಉತ್ತರಕ್ಕೆ ಸಾಗಲು ಇವರನ್ನು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಟ್ರಕ್‌ಗಳಲ್ಲಿ ತುಂಬಿ ಸಾಗಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries