HEALTH TIPS

ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

ಕುರುಕ್ಷೇತ್ರ: ಸಂಸ್ಕೃತಿ, ಮೌಲ್ಯಗಳು, ಮತ್ತು ನೈತಿಕತೆಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅಡಿಪಾಯವನ್ನು ರೂಪಿಸಿವೆ ಎಂದು ಅದರ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. 

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ಕುರುಕ್ಷೇತ್ರ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡಿದರು.

'ಆರೋಗ್ಯಕರ ಮತ್ತು ಸದೃಢ ಸಮಾಜವನ್ನು ನಿರ್ಮಿಸಲು ನೈತಿಕ ಮೌಲ್ಯಗಳು, ಶಿಸ್ತಿನ ನಡವಳಿಕೆ, ಸಾಂಸ್ಕೃತಿಕ ನೆಲೆಗಟ್ಟು ಮತ್ತು ಸರಿಯಾದ ಪ್ರಯತ್ನಗಳ ಸಾಮರಸ್ಯದ ಮಿಶ್ರಣದ ಅಗತ್ಯವಿದೆ' ಎಂದರು.

'ಕುಟುಂಬ ಪ್ರಬೋಧನ'ದ (ಕುಟುಂಬ ಜಾಗೃತಿ) ಮಹತ್ವವನ್ನು ಅವರು ಒತ್ತಿ ಹೇಳಿದರು. ಮನೆಗಳಲ್ಲಿ ಅರ್ಥಪೂರ್ಣವಾಗಿ ಸಂಭಾಷಣೆ ನಡೆಸುವ ಸಂಸ್ಕೃತಿಯನ್ನು ಪೋಷಿಸಬೇಕು. ಇಲ್ಲಿಂದಲೇ ಮಕ್ಕಳು ಸರಿ ತಪ್ಪುಗಳನ್ನು ಕಲಿಯುತ್ತಾರೆ. ಕೇವಲ ಉಪದೇಷಗಳು ಸಾಕಾಗುವುದಿಲ್ಲ. ಒಳ್ಳೆಯ ವಾತಾವರಣವು ಮಾತ್ರವೇ ಮಕ್ಕಳನ್ನು ತಪ್ಪು ದಾರಿಗೆ ಹೋಗದಂತೆ ತಡೆಯುತ್ತದೆ' ಎಂದರು.

'ಹೊರಗಿನಿಂದ ನೋಡಿ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಂಘದಲ್ಲಿ ಇದ್ದಲ್ಲಿ ಮಾತ್ರವೇ ಅದರ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಕಲೆ ಮತ್ತು ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಸ್ವಯಂಸೇವಕರು ಸಕ್ರಿಯರಾಗಿದ್ದಾರೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries