HEALTH TIPS

ನಮ್ಮ ಪ್ರತಿಕ್ರಿಯೆಗೆ ಹೆದರಿ ಟ್ರಂಪ್ ಹಿಂದೆ ಸರಿದರು: ಇರಾನ್

ಟೆಹರಾನ್: ಇರಾನ್‍ನ ಇಂಧನ ಕ್ಷೇತ್ರಗಳ ವಿರುದ್ಧದ ಯಾವುದೇ ಮಿಲಿಟರಿ ದಾಳಿಯನ್ನು ಐದು ದಿನ ತಡೆಹಿಡಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ `ಇರಾನ್‍ನ ಪ್ರತಿಕ್ರಿಯೆಗೆ ಹೆದರಿ ಟ್ರಂಪ್ ಹಿಂದೆ ಸರಿದರು' ಎಂದು ಪ್ರತಿಪಾದಿಸಿದೆ.

`ಇರಾನ್‍ನ ಪ್ರತಿಕ್ರಿಯೆಗೆ ಹೆದರಿ ಟ್ರಂಪ್, ತನ್ನ 48 ಗಂಟೆಗಳ ಗಡುವಿನಿಂದ ಹಿಂದೆ ಸರಿದಿದ್ದಾರೆ' ಎಂದು ಇರಾನ್‍ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. `ಒಂದು ವೇಳೆ ಅಮೆರಿಕವು ಇರಾನ್‍ನ ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದರೆ, ಹಾನಿಗೊಂಡ ವಿದ್ಯುತ್ ಸ್ಥಾವರಗಳು ಮರು ನಿರ್ಮಾಣಗೊಳ್ಳುವವರೆಗೆ ಹಾರ್ಮು‍ಝ್ ಜಲಸಂಧಿಯನ್ನು ಮುಚ್ಚಲಾಗುತ್ತದೆ. ಅಲ್ಲದೆ ಇಸ್ರೇಲ್‍ನ ವಿದ್ಯುತ್, ಇಂಧನ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಮೂಲಸೌಕರ್ಯದ ಮೇಲೆ ಪ್ರತಿದಾಳಿ ನಡೆಸುತ್ತೇವೆ' ಎಂದು ಇರಾನ್ ಮಿಲಿಟರಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನೂ ಪೋಸ್ಟ್ ನ ಜೊತೆ ಹಂಚಿಕೊಳ್ಳಲಾಗಿದೆ.

ಅಮೆರಿಕದೊಂದಿಗೆ ಇರಾನ್ ಮಾತುಕತೆ ನಡೆಸಿದೆ ಎಂಬ ಟ್ರಂಪ್ ಹೇಳಿಕೆಯನ್ನೂ ಇರಾನ್ ತಳ್ಳಿಹಾಕಿದೆ. ʼಉದ್ವಿಗ್ನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ರಾಷ್ಟ್ರಗಳು ಉಪಕ್ರಮ ಪ್ರಾರಂಭಿಸಿವೆ. ಆದರೆ ನಮ್ಮ ಪ್ರತಿಕ್ರಿಯೆ ಸ್ಪಷ್ಟವಾಗಿದೆ. ನಾವು ಈ ಯುದ್ಧವನ್ನು ಪ್ರಾರಂಭಿಸಿಲ್ಲ. ಆದ್ದರಿಂದ ಎಲ್ಲಾ ವಿನಂತಿಗಳನ್ನೂ ಅಮೆರಿಕಕ್ಕೆ ಉಲ್ಲೇಖಿಸಬೇಕು' ಎಂದು ಇರಾನ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries