HEALTH TIPS

ನೋಡೋಕೆ ಚೆನ್ನಾಗಿದೆ ಅಂತ ಮೋಸ ಹೋಗ್ಬೇಡಿ...ತಾಜಾ, ರುಚಿಯಾದ ಕಿತ್ತಳೆ ಖರೀದಿಸಲು ಇಲ್ಲಿದೆ ಟಿಪ್ಸ್​!

ಕಿತ್ತಳೆ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಭಾರೀ ಒಳ್ಳೆಯದು. ಇದರಲ್ಲಿ ವಿಟಮಿನ್​ ಸಿ ಅಂಶ ಸಮೃದ್ಧವಾಗಿದ್ದು, ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಅಲ್ಲದೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್​ ಇದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣಿನ ಸೇವನೆಯು ರಕ್ತದಲ್ಲಿ ಸಕ್ಕರೆ ಮಟ್ಟದ ಏರಿಕೆಯನ್ನು ತಡೆಯುತ್ತದೆ. ಹಾಗಾಗಿ ಇವುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಇನ್ನು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಕಿತ್ತಳೆ ಒಂದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಕಿತ್ತಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಇಷ್ಟೆಲ್ಲ ಪ್ರಯೋಜನವಿರುವ ಕಿತ್ತಳೆ ಹಣ್ಣುಗಳನ್ನು ಖರೀದಿಸುವಾಗ ನೀವು ರಸರಹಿತ ಹಾಗೂ ಅತಿ ಹುಳಿ ಅಂಶವುಳ್ಳ ಹಣ್ಣನ್ನು ಪಡೆಯುವ ಸಾಧ್ಯತೆಯಿದೆ. ಕಿತ್ತಳೆ ಹಣ್ಣನ್ನು ಸರಿಯಾಗಿ ಆಯ್ಕೆ ಮಾಡುವುದು ಹೇಗೆ ಎಂದು ಅನೇಕರಿಗೆ ತಿಳಿದಿಲ್ಲ. ಕೆಲವೊಂದು ಅಂಶಗಳ ಮೇಲೆ ಗಮನ ಇಡುವ ಮೂಲಕ ಉತ್ತಮವಾದ ಕಿತ್ತಳೆ ಹಣ್ಣುಗಳನ್ನು ಆಯ್ಕೆ ಮಾಡಬಹುದು. ಅವುಗಳು ಯಾವುವು ಎಂಬುದನ್ನು ನಾವಿಲ್ಲಿ ತಿಳಿಯೋಣ.

ತೂಕ

ಕಿತ್ತಳೆ ಹಣ್ಣುಗಳನ್ನು ಖರೀದಿಸುವಾಗ ಮಾರಾಟಗಾರರು ಹಣ್ಣನ್ನು ಆಯ್ಕೆ ಮಾಡಲು ಬಿಡಬೇಡಿ. ಬದಲಾಗಿ ನೀವು ಆಯ್ಕೆ ಮಾಡುವಾಗ ಜಾಗರೂಕರಾಗಿರಿ. ಕಿತ್ತಳೆ ಹಣ್ಣನ್ನು ಕೈಯಲ್ಲಿ ತೆಗೆದುಕೊಂಡು ತೂಕ ಮಾಡಿ. ತೂಕವು ಸೂಕ್ತವಾಗಿದ್ದರೆ ಅಂತಹ ಕಿತ್ತಳೆಗಳನ್ನು ಆರಿಸಿ. ಏಕೆಂದರೆ, ತೂಕವುಳ್ಳ ಕಿತ್ತಳೆಗಳು ಉತ್ತಮ ರಸವನ್ನು ಹೊಂದಿರುವ ಸಾಧ್ಯತೆ ಹೆಚ್ಚು.

ಬಣ್ಣ

ಬಣ್ಣವನ್ನು ಆಧರಿಸಿ ಕಿತ್ತಳೆ ಹಣ್ಣುಗಳನ್ನು ಎಂದಿಗೂ ಆಯ್ಕೆ ಮಾಡಬೇಡಿ. ಇಲ್ಲಿ ಕಿತ್ತಳೆ ಬಣ್ಣವು ಅಪ್ರಸ್ತುತವಾಗುತ್ತದೆ. ಕೆಲವೊಮ್ಮೆ ಒಳ್ಳೆಯ ಬಣ್ಣದ ಕಿತ್ತಳೆಗಳು ಕೆಟ್ಟದಾಗಿರಬಹುದು. ಕೆಲವು ಹಸಿರು ಕಿತ್ತಳೆಗಳು ಉತ್ತಮ ಸುವಾಸನೆ ಮತ್ತು ರಸವನ್ನು ಹೊಂದಿರಬಹುದು. ಕಿತ್ತಳೆಯ ಸಿಪ್ಪೆ ತುಂಬಾ ದಪ್ಪವಾಗಿದ್ದರೆ, ಅಂತಹ ಕಿತ್ತಳೆಗಳನ್ನು ಖರೀದಿಸಬೇಡಿ. ಏಕೆಂದರೆ ಸಿಪ್ಪೆ ದಪ್ಪಗಾಗಿದೆ ಎಂದರೆ ಕಿತ್ತಳೆಯ ಗುಣಮಟ್ಟ ಹದಗೆಡಲು ಆರಂಭಿಸಿದೆ ಎಂದರ್ಥ.

ಕಣ್ಣಾಡಿಸಿ ನೋಡಿ

ನೀವು ಕಿತ್ತಳೆ ಹಣ್ಣನ್ನು ಖರೀದಿಸುವಾಗ ಒಮ್ಮೆ ಕಣ್ಣಾಡಿಸಿ ನೋಡಿ. ಕಿತ್ತಳೆ ಹಣ್ಣುಗಳು ಅವುಗಳ ಗಾತ್ರಕ್ಕೆ ದೃಢವಾಗಿರಬೇಕು ಮತ್ತು ಭಾರವಾಗಿರಬೇಕು. ತುಂಬಾ ಮೃದುವಾದ ಅಥವಾ ಸಣ್ಣ ಸಣ್ಣ ಕಲೆಗಳಿರುವ ಕಿತ್ತಳೆ ಹಣ್ಣುಗಳನ್ನು ತಪ್ಪಿಸಿ.

ಸೀಸನ್​

ವಿವಿಧ ಬಗೆಯ ಕಿತ್ತಳೆಗಳು ವರ್ಷದ ವಿವಿಧ ಸೀಸನ್​ಗಳು ಕಂಡುಬರುತ್ತವೆ. ಉದಾಹರಣೆಗೆ ನಾವೆಲ್​ ಕಿತ್ತಳೆಗಳು ಚಳಿಗಾಲದ ಮಧ್ಯದಿಂದ ವಸಂತಕಾಲದ ಆರಂಭದವರೆಗೆ ಉತ್ತಮವಾಗಿರುತ್ತವೆ. ಅದೇ ರೀತಿ ವೇಲೆನ್ಸಿಯಾಸ್ ಕಿತ್ತಳೆಹಣ್ಣು ವಸಂತಕಾಲದ ಅಂತ್ಯದಿಂದ ಮಧ್ಯ ಬೇಸಿಗೆಯವರೆಗೆ ಉತ್ತಮವಾಗಿರುತ್ತದೆ. ಹೀಗಾಗಿ ಸೀಸನ್​ಗೆ ತಕ್ಕ ಹಣ್ಣು ಆಯ್ದುಕೊಳ್ಳಿ.

ವಾಸನೆ

ಸಿಹಿಯಾದ ಮತ್ತು ಮಾಗಿದ ಕಿತ್ತಳೆ ಹಣ್ಣುಗಳು ತಾಜಾ, ಆರೊಮ್ಯಾಟಿಕ್ ವಾಸನೆಯನ್ನು ಹೊಂದಿರುತ್ತದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries