HEALTH TIPS

ಮಧ್ಯಪ್ರಾಚ್ಯ ಸಂಘರ್ಷ | ದುಬೈಯಲ್ಲಿ ಕ್ಷಿಪಣಿಗಳ ದೃಶ್ಯ ಚಿತ್ರೀಕರಿಸಿದ ಆರೋಪದಲ್ಲಿ ಲಂಡನ್ ಮೂಲದ ವ್ಯಕ್ತಿಯ ಬಂಧನ

ಯುಎಇ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಕ್ಷಿಪಣಿಗಳ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ ದುಬೈಯಲ್ಲಿ ಲಂಡನ್ ಮೂಲದ ಪ್ರವಾಸಿಗನೊಬ್ಬನನ್ನು ಬಂಧಿಸಲಾಗಿದೆ. ಆತನ ಆರೋಪ ಸಾಬೀತಾದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸಾರ್ವಜನಿಕವಾಗಿ ಹೆಸರು ಬಹಿರಂಗಪಡಿಸದ ಲಂಡನ್‌ ಮೂಲದ 60 ವರ್ಷದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಅವರನ್ನು ಬರ್ ದುಬೈ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.

ಪ್ರಾದೇಶಿಕ ಉದ್ವಿಗ್ನತೆಯ ಸಂದರ್ಭದಲ್ಲಿ ಕ್ಷಿಪಣಿಗಳ ಚಟುವಟಿಕೆಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರೀಕರಿಸಿದ ಮತ್ತು ಹಂಚಿಕೊಂಡಿದ್ದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ವಿವಿಧ ರಾಷ್ಟ್ರಗಳ 21 ಜನರ ವಿರುದ್ಧ ಆರೋಪ ಹೊರಿಸಲಾಗಿದೆ.

ಮಧ್ಯಪ್ರಾಚ್ಯದ ಸಂಘರ್ಷದಿಂದ ಯುಎಇಯಲ್ಲಿ ಭದ್ರತಾ ಕಾಳಜಿ ಹೆಚ್ಚಿರುವ ಮಧ್ಯೆ ಈ ಬಂಧನ ನಡೆದಿದೆ. ಬಂಧನದ ವೇಳೆ ಆ ವ್ಯಕ್ತಿ ಕ್ಷಿಪಣಿಗಳ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅಧಿಕಾರಿಗಳು ಕೇಳಿದ ತಕ್ಷಣವೇ ಅವರು ಆ ವಿಡಿಯೋವನ್ನು ಅಳಿಸಿದ್ದು, ತಾನು ಯಾವುದೇ ತಪ್ಪು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries