HEALTH TIPS

ಇರಾನ್ ಸುದ್ದಿ ಪ್ರಸಾರ: ಸಿಎನ್‌ಎನ್‌ ವಿರುದ್ಧ ಅಮೆರಿಕ ಟೀಕೆ

ವಾಷಿಂಗ್ಟನ್‌: ಇರಾನ್‌ನ ಹೊಸ ಪರಮೋಚ್ಛ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅವರ ಸಾರ್ವಜನಿಕ ಭಾಷಣದ ಒಂದು ಭಾಗವನ್ನು ಪ್ರಸಾರ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಸಿಎನ್‌ಎನ್‌ ವಾಹಿನಿಯನ್ನು ತೀವ್ರವಾಗಿ ಖಂಡಿಸಿದೆ.

ಇರಾನ್ ಮೇಲೆ ದಾಳಿ ನಡೆಸುತ್ತಿರುವ ಸಮಯದಲ್ಲಿ ಅಮೆರಿಕ ವಿರೋಧಿ ನಿಲುವುಗಳನ್ನು ಬಿತ್ತರಿಸಿದ್ದಕ್ಕಾಗಿ, ಮೂರು ದಿನಗಳಲ್ಲಿ ಎರಡನೇ ಬಾರಿಗೆ ಸಿಎನ್‌ಎನ್‌ ನೆಟ್‌ವರ್ಕ್‌ ವಿರುದ್ಧ ಅಮೆರಿಕ ಹರಿಹಾಯ್ದಿದೆ.

'47 ವರ್ಷಗಳ ಕಾಲ ಅಮೆರಿಕನ್ನರನ್ನು ಕ್ರೂರವಾಗಿ ಹತ್ಯೆ ಮಾಡಿ ಹೆಮ್ಮೆಪಡುತ್ತಿದ್ದ ಅದೇ ವಿಕೃತ ಮತ್ತು ಕೊಲೆಗಾರ ಆಡಳಿತ ನಡೆಸುತ್ತಿರುವ ಇರಾನ್‌ನ ಸರ್ಕಾರಿ ಟಿ.ವಿಯ ಸುಳ್ಳು ಸುದ್ದಿಯನ್ನು‌ ಸಿಎನ್‌ಎನ್ ನಾಲ್ಕು ನಿಮಿಷಗಳ ಕಾಲ ನಿರಂತರವಾಗಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದೆ' ಎಂದು ಶ್ವೇತಭವನವು ತನ್ನ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಸಂದರ್ಶನಕ್ಕೂ ಟೀಕೆ: ಎರಡು ದಿನಗಳ ಹಿಂದೆ, ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್, ಸಿಎನ್‌ಎನ್ ವಾಹಿನಿಯ ನಿರೂಪಕ ಎರಿನ್ ಬರ್ನೆಟ್ ನಡೆಸಿಕೊಟ್ಟಿದ್ದ ಇರಾನ್‌ನ ಮಾಜಿ ಪರಮಾಣು ಸಮಾಲೋಚಕ ಹೊಸೇನ್ ಮೌಸಾವಿಯನ್ ಅವರ ಸಂದರ್ಶನವನ್ನು ಟೀಕಿಸಿದ್ದರು.

ಸಂದರ್ಶನದಲ್ಲಿ ಬರ್ನೆಟ್ ಅವರು, 'ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್ ಸರ್ಕಾರ ಹೊಂದಿರುವ ಆಸಕ್ತಿಯ ಬಗ್ಗೆ ಏನು ಹೇಳುತ್ತೀರಿ' ಎಂದು ಮೌಸಾವಿಯನ್ ಅವರನ್ನು ಕೇಳಿದ್ದರು. ಇದನ್ನು ಹೊರತುಪಡಸಿ ಸಂದರ್ಶನದಲ್ಲಿ ಬೇರೆ ಏನೂ ಇರಲಿಲ್ಲ' ಎಂದು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries