HEALTH TIPS

ಬ್ಲೂಟೂತ್ ಇಯರ್ ಫೋನ್ ಬಳಕೆಯಿಂದ ವಿಕಿರಣದ ಅಪಾಯವಿದೆಯೇ? ಮೆದುಳು ತಜ್ಞರು ಹೇಳುವುದೇನು?

ಬ್ಲೂಟೂತ್ ಇಯರ್ ಫೋನ್ ಬಳಕೆಯಿಂದ ವಿಕಿರಣದ ಅಪಾಯವಿದೆಯೇ? ಮೆದುಳು ತಜ್ಞರು ಹೇಳುವುದೇನು?

ಬ್ಲೂಟೂತ್ ಇಯರ್ ಫೋನ್ ಬಳಕೆಯಿಂದ ವಿಕಿರಣದ ಅಪಾಯವಿದೆ ಎನ್ನುವುದು ವೈಜ್ಞಾನಿಕ ಸತ್ಯವೆ ಅಥವಾ ಮೌಢ್ಯವೆ?

ಬ್ಲೂಟೂತ್ ಇಯರ್ ಫೋನ್ ಬಳಕೆ ವಿರುದ್ಧ ಸಾಮಾಜಿಕ ಜಾಗೃತಿ ಹೆಚ್ಚಾಗುತ್ತಿದೆ.

ದೈನಂದಿನ ಬಳಕೆಯ ಸಾಧನಗಳಾಗಿರುವ ಬ್ಲೂಟೂತ್ ಇಯರ್ ಫೋನ್ ವಿಕಿರಣ ಹೊರಸೂಸುವ ಬಗ್ಗೆ ಕಳವಳ ಹೆಚ್ಚಾಗುತ್ತಿದೆ. ನಿಯಮಿತ ಬಳಕೆಯಿಂದ ಮೆದುಳಿನ ಗೆಡ್ಡೆಗಳಿಗೆ ಅಪಾಯ ಹೆಚ್ಚಾಗುತ್ತದೆ ಎನ್ನುವ ಆತಂಕ ಬೆಳೆದಿದೆ. ಆದರೆ ಈ ಆತಂಕ ವೈಜ್ಞಾನಿಕವಾಗಿ ಸಾಬೀತಾಗಿದೆಯೇ ಅಥವಾ ಜನರ ಮೌಢ್ಯವೆ?


ಮೆದುಳಿನ ತಜ್ಞರಾಗಿರುವ ಅಮೆರಿಕ ಮೂಲದ ವೈದ್ಯೆ ಡಾ. ರೂಪಾ ಜುಥಾನಿ ಮಾರ್ಚ್ 19ರಂದು ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬ್ಲೂಟೂತ್ ಇಯರ್ ಫೋನ್ಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ರೂಪಾ ಜುಥಾನಿ ಅವರು ಪಿಟ್ಯುಟರಿ ಮತ್ತು ಸ್ಕಲ್ ಬೇಸ್ ಟ್ಯೂಮರ್ ಸರ್ಜನ್ ಮಾತ್ರವಲ್ಲದೆ, ಗ್ಯಾಮಾ ನೈಫ್ ರೇಡಿಯೋ ಸರ್ಜರಿಯ ವಿಶೇಷಜ್ಞೆಯೂ ಆಗಿದ್ದಾರೆ. "ಶ್ರವಣ ನರ (vestibular schwannomas), ಪಿಟ್ಯುಟರಿ ಗೆಡ್ಡೆಗಳು ಮತ್ತು ಮೆಗುಳಿನ ಕ್ಯಾನ್ಸರ್ ರೋಗದಂತಹ ನರಗಳಲ್ಲಿ ಮತ್ತು ಸುತ್ತಲೂ ಬೆಳೆಯುವ ಗೆಡ್ಡೆಗಳಲ್ಲಿ ಪರಿಣತಿ ಹೊಂದಿರುವ ಮೆದುಳಿನ ಗೆಡ್ಡೆಗೆ ಸಂಬಂಧಿಸಿದ ಸರ್ಜನ್ ಆಗಿರುವ ನಾನು ಬ್ಲೂಟೂತ್ ಹೆಡ್ಫೋನ್ಗಳ ವಿಷಯಕ್ಕೆ ಬಂದಾಗ ವಿಜ್ಞಾನವನ್ನು ಅನುಸರಿಸುತ್ತೇನೆ. ಅದಕ್ಕೆ ಬೆಂಬಲಿಸುವ ಕೆಲವು ಸತ್ಯಾಂಶಗಳು ಮತ್ತು ಅಪ್ಡೇಟ್ ಆಗಿರುವ ಡಾಟಾ ಇಲ್ಲಿದೆ" ಎಂದು ತಮ್ಮ ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

ಜುಥಾನಿ ಅವರ ಪ್ರಕಾರ ಬ್ಲೂಟೂತ್ ಹೆಡ್ಫೋನ್ಗಳು ಮೆದುಳಿಗೆ ಅಪಾಯ ಅಥವಾ ಇತರ ಗೆಡ್ಡೆಗಳ ಅಪಾಯ ತರುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಇತ್ತೀಚೆಗಿನ ಸಂಶೋಧನೆಗಳಲ್ಲಿ ಅಂತಹ ಯಾವುದೇ ವಿವರಗಳು ಬಹಿರಂಗವಾಗಿಲ್ಲ. "ಬ್ಲೂಟೂತ್ ಮೆದುಳಿಗೆ ಅಪಾಯ ಅಥವಾ ಇತರ ಟ್ಯೂಮರ್ಗಳಿಗೆ ಕಾರಣವಾಗುತ್ತದೆ ಎನ್ನುವ ಯಾವುದೇ ಸಾಕ್ಷ್ಯಗಳಿಲ್ಲ. 2022ರ ಮೆದುಳಿನ ಅಧ್ಯಯನವು 14 ವರ್ಷಗಳಿಂದ ಬ್ಲೂಟೂತ್ ಬಳಸುತ್ತಿರುವ ಒಂದು ದಶಲಕ್ಷ ಮಹಿಳೆಯರನ್ನು ಅಧ್ಯಯನ ಮಾಡಿದರೂ ಯಾವುದೇ ಅಪಾಯ ಕಂಡುಬಂದಿಲ್ಲ. ಬ್ಲೂಟೂತ್ ವಿಕಿರಣ ಇತರ ವಿಕಿರಣಗಳಂತಲ್ಲ" ಎಂದು ಅವರು ಹೇಳಿದ್ದಾರೆ.

ಮುಂದುವರಿದು ರೂಪಾ ಜುಥಾನಿ, "ಬ್ಲೂಟೂತ್ ಹೆಡ್ಫೋನ್ಗಳು ನಾನ್-ಅಯನೈಸಿಂಗ್ ವಿಕಿರಣ ಹೊರಸೂಸುತ್ತವೆ. ಅವು ಗೆಡ್ಡೆಗೆ ಕಾರಣವಾಗುವ ಅಯನೈಸಿಂಗ್ ವಿಕಿರಣದಂತೆ ಡಿಎನ್‌ಎಗೆ ಹಾನಿ ಉಂಟು ಮಾಡುವುದಿಲ್ಲ. ಬದಲಾಗಿ ಫೋನ್ ಅನ್ನು ಕಿವಿಗೆ ಸಮೀಪದಲ್ಲಿ ಇಟ್ಟು ಮಾತನಾಡುವುದು ಹೆಚ್ಚು ಅಪಾಯಕಾರಿ" ಎಂದು ಹೇಳಿದ್ದಾರೆ.

"ಫೋನ್ ಅನ್ನು ನೇರವಾಗಿ ಕಿವಿಯ ಬಳಿ ಇಡುವುದರಿಂದ ಇಯರ್ ಬಡ್ ಬಳಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸುತ್ತದೆ. ಫೋನ್ ಚಾರ್ಜ್ ಆಗುವಾಗ ಅಥವಾ ಕರೆ ಸಂಪರ್ಕದ ಸಮಯದಲ್ಲಿ ಹೆಚ್ಚು ವಿಕಿರಣ ಹೊರಸೂಸುತ್ತಿರುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಫೋನ್ನಲ್ಲಿ ಮಾತನಾಡದೆ ದೂರವಿರಿಸಿ" ಎಂದು ಅವರು ಸಲಹೆ ನೀಡಿದ್ದಾರೆ.

ಸುರಕ್ಷಿತವಾಗಿ ಫೋನ್ ಬಳಕೆ ಹೇಗೆ?

ಸಾಧ್ಯವಾದಷ್ಟು ಸಮಯ ಫೋನ್ ಅನ್ನು ಸ್ಪೀಕರ್ನಲ್ಲಿಟ್ಟು ಮಾತನಾಡುವುದು ಉತ್ತಮ ಅಭ್ಯಾಸ. ಫೋನ್ ಅನ್ನು ನೇರವಾಗಿ ಕಿವಿಯ ಬಳಿ ಇರಿಸುವುದಕ್ಕಿಂತ ಹೆಚ್ಚಾಗಿ ಹೆಡ್ ಫೋನ್ ಬಳಕೆ ಉತ್ತಮ. ಅಧ್ಯಯನಗಳು ತೋರಿಸಿರುವಂತೆ ಫೋನ್ ಅನ್ನು ಕಿವಿಯ ಬಳಿ ಹಿಡಿದು ಮಾತನಾಡುವುದರಿಂದ ಶ್ರವಣ ನರದಲ್ಲಿ ಬದಲಾವಣೆ ಕಂಡುಬರುತ್ತದೆ. ಆದರೆ ಹೆಡ್ಫೋನ್ಗಳಿಂದ ಅಂತಹ ಬದಲಾವಣೆ ಕಾಣುವುದಿಲ್ಲ. ಆದರೆ ಇಯರ್ಬಡ್ ಸೇರಿದಂತೆ ಎಲ್ಲಾ ತಂತ್ರಜ್ಞಾನ ಬಳಕೆಯಲ್ಲಿ ಇಲ್ಲದಾಗ ಕಳಚಿ ಸುರಕ್ಷಿತವಾಗಿ ಇಡಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಾರೆ.

ಸೂಚನೆ: ಈ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯನ್ನು ಆಧರಿಸಿ ನೀಡಲಾಗಿದೆ. ವೈಜ್ಞಾನಿಕವಾಗಿ ನಿಖರವಾದ ಸಲಹೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries