HEALTH TIPS

ಮಾಲ್ಡೀವ್ಸ್‌ನಲ್ಲಿ ಸ್ಪೀಡ್ ಬೋಟ್ ಅಪಘಾತ: ಗೌತಮ್ ಸಿಂಘಾನಿಯಾಗೆ ಗಾಯ

 ಮಾಲೆ: ಮಾಲ್ಡೀವ್ಸ್‌ನ ಫೆಲಿದೂ ದ್ವೀಪದಲ್ಲಿ ಸಂಭವಿಸಿದ ಸ್ಪೀಡ್ ಬೋಟ್ ಅವಘಡದಲ್ಲಿ ರೇಮಂಡ್ ಗ್ರೂಪ್‌ನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ, ಭಾರತ ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 


ಶುಕ್ರವಾರ (ಮಾರ್ಚ್ 20) ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಬ್ರಿಟನ್ ಮತ್ತು ರಷ್ಯಾ ಮೂಲದ ಇಬ್ಬರು ಮಹಿಳೆಯರು ಮತ್ತು ಐದು ಭಾರತೀಯರು ಸೇರಿದಂತೆ ಒಟ್ಟು 7 ಮಂದಿ ಬೋಟ್‌ನಲ್ಲಿದ್ದರು. ಬೋಟ್ ಮಗುಚಿ ಸಮುದ್ರಕ್ಕೆ ಬಿದ್ದಾಗ ರಷ್ಯಾ ಮಹಿಳೆ ಮತ್ತು ನಾಲ್ವರು ಭಾರತೀಯರು ನೀರಿಗೆ ಧುಮುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರಲ್ಲೊಬ್ಬರಾದ 60 ವರ್ಷದ ಸಿಂಘಾನಿಯಾ ಅವರನ್ನು ರಕ್ಷಿಸಲಾಗಿದೆ. ಅವರಿಗೆ ಸಣ್ಣ ಪ್ರಮಾನದ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಪತ್ತೆಯಾಗಿರುವ ಭಾರತೀಯರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಸ್ಪೀಡ್‌ಗಾಗಿಯೇ ವಿನ್ಯಾಸಗೊಳಿಸಲಾಗಿದ್ದ ಬೋಟ್ ಅಪಘಾತಕ್ಕೀಡಾಗಿರುವ ಬಗ್ಗೆ ನೌಕಾಪಡೆ ಪರಿಶೀಲನೆ ನಡೆಸುತ್ತಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries