HEALTH TIPS

ಹಿಂದೂ ಮಹಾಸಾಗರದ ಅಮೆರಿಕ-ಬ್ರಿಟನ್ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ

 ಲಂಡನ್: ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಆರಂಭಿಸಿರುವ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಇರಾನ್ ಹಿಂದೂ ಮಹಾಸಾಗರದ ಅಮೆರಿಕ-ಬ್ರಿಟನ್ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿದ್ದು, ಜಾಗತಿಕ ಪ್ರವಾಸಿ ತಾಣಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. 



ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಈಗ ಹಿಂದೂ ಮಹಾಸಾಗರದ ಆಳಕ್ಕೆ ವಿಸ್ತರಿಸಿದ್ದು, ಬ್ರಿಟನ್ ಮತ್ತು ಅಮೆರಿಕದ ಜಂಟಿ ಮಿಲಿಟರಿ ನೆಲೆಯಾಗಿರುವ ಡಿಯಾಗೋ ಗಾರ್ಸಿಯಾ ಮೇಲೆ ಇರಾನ್ ಎರಡು ಖಂಡಾಂತರ ಕ್ಷಿಪಣಿಗಳನ್ನು ಹಾರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇರಾನ್‌ನಿಂದ ಸುಮಾರು 4,000 ಕಿ.ಮೀ ದೂರದಲ್ಲಿರುವ ಈ ದ್ವೀಪದ ಮೇಲೆ ನಡೆದ ದಾಳಿಯಲ್ಲಿ ಕ್ಷಿಪಣಿಗಳು ಗುರಿ ತಲುಪಿಲ್ಲ. ಒಂದು ಕ್ಷಿಪಣಿಯು ಹಾರಾಟದ ಮಧ್ಯದಲ್ಲೇ ವಿಫಲವಾದರೆ, ಮತ್ತೊಂದನ್ನು ಅಮೆರಿಕದ ಯುದ್ಧನೌಕೆಯು ಹೊಡೆದುರುಳಿಸಿದೆ. ಇಷ್ಟು ದೂರದವರೆಗೆ ಕ್ಷಿಪಣಿ ದಾಳಿ ನಡೆಸಿರುವುದು ಇರಾನ್‌ನ ಶಸ್ತ್ರಾಸ್ತ್ರ ಸಾಮರ್ಥ್ಯವು ಯುರೋಪ್‌ನ ಮೇಲೂ ದಾಳಿ ಮಾಡುವಷ್ಟು ಪ್ರಬಲವಾಗಿದೆ ಎಂದು ತೋರಿಸಿಕೊಟ್ಟಿದೆ.‌

'ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾ ದ್ವೀಪದ ಮೇಲೆ ದಾಳಿ ನಡೆಸಲು ಇರಾನ್ ಪ್ರಯತ್ನಿಸಿದೆ ಎಂಬ ವರದಿಗಳು ನಿಜವಾದರೆ, ದಕ್ಷಿಣದ ಮೇಲೆ ದಾಳಿ ಮಾಡುವುದರ ಮೂಲಕ ಪಶ್ಚಿಮದ ಕಡೆಗೆ ಸ್ಪಷ್ಟ ಸಂದೇಶವನ್ನು ಇರಾನ್ ಕಳುಹಿಸಿದೆ'ಎಂದು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಎಕ್ಸ್ಸ್, ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಡಿಯಾಗೋ ಗಾರ್ಸಿಯಾ ನೆಲೆಯು ಅಫ್ಗಾನಿಸ್ತಾನ ಮತ್ತು ಇರಾಕ್‌ನಲ್ಲಿ ಅಮೆರಿಕದ ಬಾಂಬ್ ದಾಳಿ ಕಾರ್ಯಾಚರಣೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸಿದೆ. ಇರಾನ್ ವಿರುದ್ಧ ರಕ್ಷಣಾತ್ಮಕ ಕಾರ್ಯಾಚರಣೆಗ ಎಂದೇ ಕರೆಯುತ್ತಿರುವ ಅಮೆರಿಕ ದಾಳಿಗೆ ಬಳಸುತ್ತಿರುವ ಎರಡು ಬ್ರಿಟನ್ ನೆಲೆಗಳಲ್ಲಿ ಇದೂ ಒಂದಾಗಿದೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries