HEALTH TIPS

ಈ ದೇಶದಲ್ಲಿ ಒಂದಲ್ಲ, ಎರಡಲ್ಲ, ಅತೀ ಹೆಚ್ಚು ಭಾಷೆ ಮಾತನಾಡ್ತಾರೆ! ಭಾರತವಲ್ಲ, ಮತ್ಯಾವುದು ಆ ದೇಶ?

ಇಂದು ಜಗತ್ತಿನಲ್ಲಿ 7,000 ಕ್ಕೂ ಹೆಚ್ಚು ಭಾಷೆಗಳನ್ನು (Language) ಮಾತನಾಡಲಾಗುತ್ತದೆ. ಭಾರತ (India) ಅಥವಾ ಚೀನಾದಂತಹ (China) ದೊಡ್ಡ ಜನಸಂಖ್ಯೆಯನ್ನು (Population) ಹೊಂದಿರುವ ದೇಶಗಳಲ್ಲಿ ಅತಿ ಹೆಚ್ಚು ಭಾಷೆಗಳಿವೆ ಎಂದು ಅನೇಕ ಜನರು ಸಾಮಾನ್ಯವಾಗಿ ಭಾವಿಸುತ್ತಾರೆ.

ಆದ್ರೆ, ಓಷಿಯಾನಿಯಾ ಪ್ರದೇಶದ ಈ ಸಣ್ಣ ದೇಶ (Country) ಭಾಷೆಗಳ ಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಯಾವುದು ಆ ದೇಶ? ಹಾಗೇ ಈ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದಲ್ಲಿದೆ 800ಕ್ಕೂಹೆಚ್ಚುಭಾಷೆಗಳು

ಪಪುವಾ ನ್ಯೂಗಿನಿಯಾ, ಭಾಷೆಗಳ ಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಸುಮಾರು 11 ಮಿಲಿಯನ್ ಜನರಿರುವ ಈ ದೇಶದಲ್ಲಿ 800ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ದೇಶದ ಕಡಿದಾದ ಪರ್ವತಗಳು, ಆಳವಾದ ಕಣಿವೆಗಳು ಮತ್ತು ದ್ವೀಪಸಮೂಹಗಳು ಜನರನ್ನು ವಿಭಿನ್ನ ಗುಂಪುಗಳಾಗಿ ವಿಂಗಡಿಸಿವೆ. ಈ ಭೌಗೋಳಿಕ ಪ್ರತ್ಯೇಕತೆಯು ಪ್ರತಿಯೊಂದು ಗುಂಪು ತಮ್ಮದೇ ಆದ ವಿಶಿಷ್ಟ ಭಾಷೆಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ.

17,000 ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಅಲ್ಲಿ 700ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ಬಹಾಸ ಇಂಡೋನೇಷ್ಯಾ ರಾಷ್ಟ್ರೀಯ ಭಾಷೆಯಾಗಿದ್ದರೂ, ಅದರ ಭೌಗೋಳಿಕ ವೈವಿಧ್ಯತೆಯಿಂದಾಗಿ ಅನೇಕ ಸ್ಥಳೀಯ ಭಾಷೆಗಳು ಇನ್ನೂ ಜೀವಂತವಾಗಿವೆ. ಇದರ ನಂತರ ಆಫ್ರಿಕಾದ ದೇಶವಾದ ನೈಜೀರಿಯಾ 500ಕ್ಕೂ ಹೆಚ್ಚು ಭಾಷೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ನೈಜೀರಿಯಾ 250ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳಿವೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಉಪಭಾಷೆಗಳನ್ನು ಹೊಂದಿದೆ. ಇಂಗ್ಲಿಷ್ ಅಧಿಕೃತ ಭಾಷೆಯಾಗಿದ್ದರೂ, ಹೌಸಾ ಮತ್ತು ಯೊರುಬಾದಂತಹ ಭಾಷೆಗಳು ಜನರ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಭಾರತವು ಭಾಷಾ ವೈವಿಧ್ಯತೆಯಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದಲ್ಲಿ 400ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ಇದು ಮುಖ್ಯವಾಗಿ ಭಾರತದ ಪ್ರಾಚೀನ ನಾಗರಿಕತೆ, ವಿಶಾಲ ಪ್ರದೇಶ ಮತ್ತು ವೈವಿಧ್ಯಮಯ ಸಾಮಾಜಿಕ ರಚನೆಯಿಂದಾಗಿ ಬೇರೆ ಬೇರೆ ಭಾಷೆಗಳನ್ನು ಮಾತನಾಡಲಾಗುತ್ತದೆ.

ಭಾರತೀಯ ಸಂವಿಧಾನದ ಸುಮಾರು 22 ಭಾಷೆಗಳನ್ನು ಗುರುತಿಸಲಾಗಿದ್ದರೂ, ಇಂದಿಗೂ ಸಾವಿರಾರು ಉಪಭಾಷೆಗಳು ಬಳಕೆಯಲ್ಲಿವೆ. ಪ್ರತಿ ಕೆಲವು ಕಿಲೋಮೀಟರ್‌ಗಳಿಗೆ ಒಂದು ಭಾಷೆಯ ಉಚ್ಚಾರಣೆ ಮತ್ತು ಶೈಲಿ ಬದಲಾಗುವುದು ಭಾರತದ ವಿಶಿಷ್ಟ ಲಕ್ಷಣವಾಗಿದೆ. ಐದನೇ ಸ್ಥಾನದಲ್ಲಿ ಅಮೆರಿಕ ಇದೆ, ಅಲ್ಲಿ ವಲಸೆ ಮತ್ತು ಸ್ಥಳೀಯ ಜನರ ಕೊಡುಗೆಯಿಂದಾಗಿ 300 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ. ಹೀಗಾಗಿ, ಭಾಷೆಗಳು ಕೇವಲ ಸಂವಹನ ಸಾಧನಗಳಲ್ಲ, ಬದಲಾಗಿ ಆಯಾ ದೇಶಗಳ ಸಾಂಸ್ಕೃತಿಕ ಮತ್ತು ಭೌಗೋಳಿಕ ಗುರುತುಗಳಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries