HEALTH TIPS

ಕಟ್ಟಡದ ಸ್ಲ್ಯಾಬ್ ಮೈಮೇಲೆ ಬಿದ್ದು ಸಾರಣೆ ಕಾರ್ಮಿಕ ಮೃತ್ಯು

 ಉಪ್ಪಳ:  ಕಟ್ಟಡದ  ಸ್ಲ್ಯಾಬ್ ತುಂಡಾಗಿ ಮೈಮೇಲೆ ಬಿದ್ದು ಸಾರಣೆ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಜೋಡುಕಲ್ಲು ನವೋದಯನಗರ ನಿವಾಸಿ  ಕೇಶವ ಎಂಬವರ ಪುತ್ರ ಶಂಕರ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ. 


ಮೊನ್ನೆ ಮಧ್ಯಾಹ್ನ ವೇಳೆ ಉಪ್ಪಳ ಮಣಿಮುಂಡದಲ್ಲಿ ದುರ್ಘಟನೆ ಸಂಭವಿಸಿದೆ. ಶಂಕರ ಕಟ್ಟಡಕ್ಕೆ ಸಾರಣೆ ನಡೆಸುತ್ತಿದ್ದಂತೆ ಸ್ಲ್ಯಾಬ್ ತುಂಡಾಗಿ ಅವರ ಮೈಮೇಲೆ ಬಿದ್ದಿದೆ.  ಇದರಿಂದ ಗಂಭೀರ ಗಾಯಗೊಂಡ ಇವರನ್ನು ಜೊತೆಗಿದ್ದವರು ಕೂಡಲೇ ಉಪ್ಪಳದ ಆಸ್ಪತ್ರೆಗೂ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ  ಇವರು ಮೃತಪಟ್ಟಿದ್ದಾರೆ.

ಶಂಕರರ ಜೊತೆಗೆ ಇತರ ನಾಲ್ಕು ಮಂದಿ ಕೆಲಸದಲ್ಲಿ ನಿರತರಾಗಿದ್ದರು. ಸ್ಲ್ಯಾಬ್ ತುಂಡಾಗಿ  ಬೀಳುತ್ತಿದ್ದಂತೆ ಜೊತೆಗಿದ್ದವರು ದೂರಕ್ಕೆ ಓಡಿದು ದರಿಂದ  ಅಪಾಯದಿಂದ ಪಾರಾಗಿ ದ್ದಾರೆ. ಓರ್ವ ಸಣ್ಣಪುಟ್ಟ ಗಾಯಗೊಂ ಡಿರುವುದಾಗಿ ಹೇಳಲಾಗುತ್ತಿದೆ.

ಮೃತರು ತಂದೆ, ತಾಯಿ ರಮಾವತಿ, ಸಹೋದರರಾದ ಸಂತೋಷ್,  ವೇಣುಗೋಪಾಲ್, ಸಹೋದರಿ ರೇಶ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries