HEALTH TIPS

ಪ್ರಶ್ನೆಪತ್ರಿಕೆ ಭದ್ರತೆಯಲ್ಲಿ ರಾಜಿಯಾಗಿಲ್ಲ: ಸಿಬಿಎಸ್‌ಇ ಸ್ಪಷ್ಟನೆ

 ನವದೆಹಲಿ (PTII): 'ಪ್ರಶ್ನೆಪತ್ರಿಕೆಗಳ ನೈಜತೆ ಮತ್ತು ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ' ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದೆ.


ಮಾರ್ಚ್‌ 9ರಂದು ನಡೆದ ಸಿಬಿಎಸ್‌ಇ 12ನೇ ತರಗತಿ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ 'ರಿಕ್‌ ರೋಲ್‌' ಕ್ಯೂಆರ್‌ ಕೋಡ್‌ ಇದ್ದು, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದಾಗ 'ನೆವರ್‌ ಗಿವ್‌ ಆಪ್‌' ಹಾಡಿನ ವಿಡಿಯೊಗೆ ಸಂಪರ್ಕವಾಗುತ್ತಿರುವುದು ಕಂಡುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತವಾಗಿರುವ ನಡುವೆ ಸಿಬಿಎಸ್‌ಇ ಈ ಹೇಳಿಕೆ ನೀಡಿದೆ.

'ಪ್ರಶ್ನೆ ಪತ್ರಿಕೆಯ ನೈಜತೆ ಪರಿಶೀಲನೆಗಾಗಿ ಕ್ಯೂಆರ್‌ ಕೋಡ್‌ ಸೇರಿದಂತೆ ಅನೇಕ ಭದ್ರತಾ ಅಂಶಗಳನ್ನು ಅಳವಡಿಸಲಾಗಿದೆ. ಕೆಲವು ಪ್ರಶ್ನೆಪತ್ರಿಕೆಗಳ ಸೆಟ್‌ನಲ್ಲಿ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವಾಗ ಯೂಟ್ಯೂಬ್‌ ವಿಡಿಯೊಗೆ ಲಿಂಕ್‌ ಆಗಿರುವುದು ಕಂಡುಬಂದಿದೆ' ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಾನ್ಯಂ ಭಾರದ್ವಾಜ್‌ ಅವರು ಒಪ್ಪಿಕೊಂಡಿದ್ದಾರೆ.

'ಇದು ಪ್ರಶ್ನೆಪತ್ರಿಕೆಯ ನೈಜತೆ ಕುರಿತು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಕಳವಳ ಹುಟ್ಟಲು ಕಾರಣವಾಗಿದೆ. ಆದರೆ, ಪ್ರಶ್ನೆಪತ್ರಿಕೆಯು ನೈಜತೆಯಿಂದ ಕೂಡಿರುವುದನ್ನು ದೃಢೀಕರಿಸಲಾಗಿದೆ ಮತ್ತು ಅದರ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಆದರೂ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಭವಿಷ್ಯದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries