ನವದೆಹಲಿ: 'ಬಿ.ಇಡಿ. ಅಧ್ಯಯನ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುವ ಯಾವ ಪ್ರಸ್ತಾವವೂ ಇಲ್ಲ' ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಸೋಮವಾರ ಲೋಕಸಭೆಗೆ ತಿಳಿಸಿದೆ.
'ರಾಷ್ಟ್ರೀಯ ಅಧ್ಯಾಪಕ ಶಿಕ್ಷಣ ಮಂಡಳಿಯಿಂದ (ಎನ್‌ಸಿಟಿಇ) ಪಡೆದ ಮಾಹಿತಿಯ ಪ್ರಕಾರ, ಬಿ.ಇಡಿ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುವ ಯಾವ ಪ್ರಸ್ತಾವವೂ ನಮ್ಮ ಮುಂದೆ ಇಲ್ಲ' ಎಂದು ಸಚಿವಾಲಯ ಹೇಳಿದೆ.
'ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸಿನ ಅನ್ವಯ ಬಿ.ಇಡಿ ಅಧ್ಯಯನ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗುವುದು (2014ಕ್ಕೂ ಮೊದಲು ಇದ್ದಂತೆ) ಎಂದು ರಾಷ್ಟ್ರೀಯ ಅಧ್ಯಾಪಕ ಶಿಕ್ಷಣ ಮಂಡಳಿ ಕಳೆದ ವರ್ಷ ಹೇಳಿತ್ತು.

