ಯುದ್ಧನೌಕೆಗಳನ್ನು ಕಳುಹಿಸಲು ಆಸ್ಟ್ರೇಲಿಯಾವೂ ನಿರಾಕರಿಸಿದೆ.
'ಜಲಸಂಧಿಯ ಪ್ರಾಮುಖ್ಯತೆಯನ್ನು ಆಸ್ಟ್ರೇಲಿಯಾ ಗುರುತಿಸುತ್ತದೆ, ಆದರೆ ಯುದ್ಧನೌಕೆಗಳನ್ನು ಕಳುಹಿಸಲು ನಮ್ಮನ್ನು ಕೇಳಲಾಗಿಲ್ಲ ಮತ್ತು ಕಳುಹಿಸುವ ಯೋಜನೆಯೂ ಇಲ್ಲ' ಎಂದು ಆಸ್ಟ್ರೇಲಿಯಾದ ಸಚಿವೆ ಕ್ಯಾಥರಿನ್ ಕಿಂಗ್ ತಿಳಿಸಿದ್ದಾರೆ. ಜಪಾನ್ ಕೂಡ ಯುದ್ಧನೌಕೆ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಕಡಲ ಭದ್ರತಾ ಕಾರ್ಯಾಚರಣೆಯನ್ನು ಪರಿಗಣಿಸುತ್ತಿಲ್ಲ ಮತ್ತು ದೇಶೀಯ ಕಾನೂನಿನ ಮಿತಿಯೊಳಗೆ ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ಪ್ರಧಾನಿ ಸನೈ ಟಕೈಚಿ ತಿಳಿಸಿದ್ದಾರೆ.

