HEALTH TIPS

ಮಧ್ಯಪ್ರಾಚ್ಯ ಸಂಘರ್ಷ| ಇರಾನ್ ಶತ್ರುಗಳನ್ನು ಮೂರ್ಖರನ್ನಾಗಿ ಮಾಡಿದ್ಯಾ? : ಚರ್ಚೆಗೆ ಗ್ರಾಸವಾದ ಇಸ್ರೇಲ್‌ ನ IDF ಹಂಚಿಕೊಂಡ ವೀಡಿಯೊ

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಈ ಮಧ್ಯೆ ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್) ಯುದ್ಧದ ವೇಳೆ ಇರಾನ್‌ನ Mi-17 ಹೆಲಿಕಾಪ್ಟರ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದೆಯೆಂದು ಹೇಳುವ ವಿಡಿಯೋವನ್ನು ಹಂಚಿಕೊಂಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಬ್ಲ್ಯಾಕ್‌ ಆಂಡ್‌ ವೈಟ್ ವೀಡಿಯೊ ನಿಜವಾದ ಹೆಲಿಕಾಪ್ಟರ್ ಗೆ ದಾಳಿ ಮಾಡಿರುವುದನ್ನು ತೋರಿಸುತ್ತಿಲ್ಲ, ಬದಲಿಗೆ ಹೆಲಿಕಾಪ್ಟರ್‌ನ ರೇಖಾಚಿತ್ರವನ್ನು ತೋರಿಸುತ್ತಿದೆ ಎಂದು ಗಮನಸೆಳೆದಿದ್ದಾರೆ ಎಂದು NDTV ವರದಿ ಮಾಡಿದೆ.
ಇಸ್ರೇಲ್‌ ರಕ್ಷಣಾ ಪಡೆ ಮಾರ್ಚ್ 4ರಂದು ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಇರಾನ್‌ ನಲ್ಲಿರುವ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿ ಆಸ್ತಿಗಳು ಮತ್ತು ಕಟ್ಟಡಗಳನ್ನು ನಾಶಪಡಿಸಿರುವುದನ್ನು ತೋರಿಸುತ್ತದೆ. ಇದಲ್ಲದೆ ವಿಡಿಯೋದಲ್ಲಿ Mi-17 ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿರುವುದಾಗಿ ಐಡಿಎಫ್ ಹೇಳಿದೆ. ಆದರೆ, ದಾಳಿಯಲ್ಲಿ ನಿಜವಾದ ಹೆಲಿಕಾಪ್ಟರ್ ನಾಶಗೊಳಿಸಲಾಗಿದೆಯಾ ಅಥವಾ ಇದು ರೇಖಾ ಚಿತ್ರವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.

ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, "ನೀವು ನಿಮ್ಮನ್ನೇ ಇಷ್ಟು ಅವಮಾನಗೊಳಿಸುವಂತಹ ಪೋಸ್ಟ್ ಯಾಕೆ ಹಾಕಿದ್ದೀರಿ? ಅದು ನಿಜವಾದ ಹೆಲಿಕಾಪ್ಟರ್ ಆಗಿದ್ದರೆ, ಬಾಂಬ್ ದಾಳಿಯ ಮೊದಲು ರೆಕ್ಕೆ ಇದ್ದಂತೆ ಕಾಣಿಸಿಕೊಳ್ಳುತ್ತಿರಲಿಲ್ಲ. ನೀವು ಒಂದು ರೇಖಾ ಚಿತ್ರದ ಮೇಲೆ ಬಾಂಬ್ ಹಾಕಿದ್ದೀರಿ" ಎಂದು ಐಡಿಎಫ್‌ ಅನ್ನು ಟೀಕಿಸಿದ್ದಾರೆ.

ಮತ್ತೊಬ್ಬ ಬಳಕೆದಾರ, "ಇಸ್ರೇಲ್, ಮಕ್ಕಳಿರುವ ಶಾಲೆಗಳ ಮೇಲೆ ಬಾಂಬ್ ಹಾಕುವುದಲ್ಲದೇ, ನೆಲದ ಮೇಲೆ ರೇಖಾ ಚಿತ್ರವನ್ನು ಬಿಡಿಸುವುದರಲ್ಲಿಯೂ ಪರಿಣತಿ ಹೊಂದಿದೆ" ಎಂದು ಹೇಳಿದ್ದಾರೆ.

ಇನ್ನು ಕೆಲವರು ಐಡಿಎಫ್ ಇರಾನ್‌ನ ಸೇನಾ ಆಸ್ತಿಯನ್ನು ನಾಶಪಡಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಿಕೊಂಡಿದ್ದಾರೆ.

ಕೆಲವು ಸ್ಥಳೀಯ ಮಾಧ್ಯಮ ವರದಿಗಳು ಇರಾನ್ ನೆಲದ ಮೇಲೆ ಹೆಲಿಕಾಪ್ಟರ್‌ಗಳ ನಕಲಿ ರೇಖಾ ಚಿತ್ರಗಳನ್ನು ರಚಿಸುವ ಮೂಲಕ ಇಸ್ರೇಲ್ ಮಿಲಿಟರಿಯನ್ನು ಯಶಸ್ವಿಯಾಗಿ ಮೂರ್ಖರನ್ನಾಗಿಸಿದೆ ಎಂದು ಹೇಳಿಕೊಂಡಿದೆ.

חיל האוויר ממשיך לפגוע ביכולות האוויריות של המשטר האיראני: סוכלו חיילים איראנים שהפעילו מערכות הגנה אווירית נגד מטוסי חיל האוויר
Embedded video
Embedded video
296
Reply
Copy link

ಆದರೆ, ಐಡಿಎಫ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಮೌನವನ್ನು ವಹಿಸಿದೆ. ಈ ಪೋಸ್ಟ್ ಇನ್ನೂ ಐಡಿಎಫ್‌ನ ಎಕ್ಸ್‌ ಖಾತೆಯಲ್ಲಿದೆ.

ಈ ದಾಳಿಗೆ ಇಸ್ರೇಲ್‌ಗೆ ಲಕ್ಷಾಂತರ ಡಾಲರ್ ವೆಚ್ಚವಾಗಿರಬಹುದು. ಸರಾಸರಿ ಒಂದು ಇಸ್ರೇಲ್ ಕ್ಷಿಪಣಿಗೆ ಸುಮಾರು 3 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ನಕಲಿ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಕೆಲವೇ ಡಾಲರ್‌ಗಳು ಸಾಕು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries