ಕಿನ್ಷಾಸ: ಪೂರ್ವ ಕಾಂಗೋದ ಕೋಲ್ಟನ್(ಮಂದ ಕಪ್ಪು ಅದಿರು) ಗಣಿಗಾರಿಕೆ ಪ್ರದೇಶದಲ್ಲಿ ಗಣಿಯೊಂದು ಕುಸಿದು ಕನಿಷ್ಠ 200 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಎಂ23 ಬಂಡುಕೋರ ಗುಂಪಿನ ನಿಯಂತ್ರಣದಲ್ಲಿರುವ ರುಬಯಾ ಗಣಿಯಲ್ಲಿ ಮಂಗಳವಾರ ದುರಂತ ಸಂಭವಿಸಿದೆ.
ಕನಿಷ್ಠ 200 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನೂ ಕೆಲವರು ನಾಪತ್ತೆಯಾಗಿರುವ ಮಾಹಿತಿಯಿದೆ ಎಂದು ಕಾಂಗೋದ ಗಣಿ ಇಲಾಖೆ ಹೇಳಿದೆ. ಇದನ್ನು ಸ್ಥಳೀಯರೂ ದೃಢಪಡಿಸಿದ್ದಾರೆ.
ಆದರೆ ಈ ಹೇಳಿಕೆಯನ್ನು ತಿರಸ್ಕರಿಸಿರುವ ಎಂ23 ಬಂಡುಕೋರ ಗುಂಪು, ಗಣಿಕುಸಿತ ಸಂಭವಿಸಿಲ್ಲ. ಬಾಂಬ್ ದಾಳಿಯಿಂದ ಸಾವು ಸಂಭವಿಸಿದೆ. ಕೇವಲ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿದೆ.

