ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದ LPG ಬುಕಿಂಗ್ ಪ್ರಮಾಣವು 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದ ಜನರಲ್ಲಿ ಉಂಟಾಗಿದ್ದ ಭೀತಿ ಕುಂಠಿತವಾಗುತ್ತಿರುವ ಸೂಚನೆ ದೊರೆತಿದೆ ಎಂದು ಕೇಂದ್ರ ಹೇಳಿದೆ.
ಮಧ್ಯಪ್ರಾಚ್ಯ ಪರಿಸ್ಥಿತಿಯ ಬಗ್ಗೆ ದೈನಂದಿನ ಮಾಹಿತಿ ಹಂಚಿಕೊಳ್ಳುತ್ತಿರುವ ಕೇಂದ್ರ, ಆನ್ಲೈನ್ ಮೂಲಕ LPG ಬುಕ್ಕಿಂಗ್ ಪ್ರಮಾಣವು ಶೇ. 84ರಿಂದ ಶೇ. 87ಕ್ಕೆ ಏರಿಕೆಯಾಗಿದೆ ಎಂದು ಎಂದು ತಿಳಿಸಿದೆ. ಅನಿಲ ವಿತರಣಾ ಕಂಪೆನಿಗಳು ಡಿಜಿಟಲ್ ಬುಕ್ಕಿಂಗ್ ಗೆ ಉತ್ತೇಜನ ನೀಡಿರುವುದು ಹಾಗೂ ಡೀಲರ್ ಗಳ ಬಳಿ ಜನರು ಗುಂಪುಗೂಡಿ ಖರೀದಿಸುವ ಪ್ರವೃತ್ತಿ ಕಡಿಮೆಯಾಗಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದೆ.
ದೇಶದ ಎಲ್ಲಾ ತೈಲ ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಪ್ರಮಾಣದ ಕಚ್ಚಾ ತೈಲದ ಸಂಗ್ರಹ ಲಭ್ಯವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಆಮದು ಅಗತ್ಯವಿಲ್ಲ ಎಂದೂ ತಿಳಿಸಿದೆ.
LPG ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಿಲಿಂಡರ್ ಕೊರತೆ ಕಂಡುಬಂದಿಲ್ಲ ಎಂದು ತೈಲ ಮಾರುಕಟ್ಟೆ ಕಂಪೆನಿಗಳು
ತಿಳಿಸಿವೆ. ಪೆಟ್ರೋಲ್, ಡೀಸೆಲ್ ಹಾಗೂ LPGಯ ಪೂರೈಕೆಯನ್ನು ಪ್ರತಿದಿನ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವು ಹೇಳಿವೆ.