ಐತಿಹಾಸಿಕ 10 ದಿನಗಳ ಚಂದ್ರಯಾನ ಮುಗಿಸಿದ ಆರ್ಟೆಮಿಸ್-2 ಗಗನಯಾತ್ರಿಗಳು ಶನಿವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳನ್ನು ಹೊತ್ತಿದ್ದ ಗಗನನೌಕೆ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಕೆಳಕ್ಕಿಳಿಯಿತು.
ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಬಳಿಕ ನಾಸಾ ಆರ್ಟೆಮಿಸ್-2 ಸಿಬ್ಬಂದಿಯೊಂದಿಗೆ ಮರು ಸಂಪರ್ಕ ಸಾಧಿಸಲು ಯಶಸ್ವಿಯಾದರು.
ಅಮೆರಿಕದ ಸೇನಾ ಹಡಗಿನಲ್ಲಿ ಆಗಮಿಸಿದ ಪುನಶ್ಚೇತನ ತಂಡ ಎಲ್ಲ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತೆಗೆಯಿತು. ಸಂಪರ್ಕ ಮರುಸಾಧಿಸಿದ ಬಳಿಕ ಮಾತನಾಡಿದ ಮಿಷನ್ ಕಮಾಂಡರ್ ರೀಡ್ ವೈಸ್‌ಮನ್, "ನಿಮ್ಮ ಧ್ವನಿ ದೊಡ್ಡದಾಗಿ ಸ್ಪಷ್ಟವಾಗಿ ಕೇಳಿಸುತ್ತಿದೆ" ಎಂದು ಹೇಳಿದರು. "ಅದ್ಭುತ ಪ್ರಯಾಣ; ನಾವೆಲ್ಲ ಸ್ಥಿರವಾಗಿದ್ದೇವೆ" ಎಂದು ಬಣ್ಣಿಸಿದರು.

