ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಮೇ15ರಿಂದ ಮೇ21ರವರೆಗೆ ಪರೀಕ್ಷೆಗಳು ನಡೆಯಲಿವೆ.
2026ನೇ ಶೈಕ್ಷಣಿಕ ಸಾಲಿನಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇಯು ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುತ್ತಿದೆ.
ಫೆಬ್ರುವರಿಯಲ್ಲಿ ಮೊದಲ ಕಡ್ಡಾಯ ಬೋರ್ಡ್ ಪರೀಕ್ಷೆ ನಡೆದಿದ್ದು, ಈಗಾಗಲೇ ಫಲಿತಾಂಶವೂ ಪ್ರಕಟಗೊಂಡಿದೆ. ಈಗ ನಡೆಯುವ ಎರಡನೇ ಹಂತದ ಪರೀಕ್ಷೆ ಐಚ್ಛಿಕವಾಗಿದ್ದು, ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಅಥವಾ ಅನುತ್ತೀರ್ಣರಾದವರು ಇದಕ್ಕೆ ಹಾಜರಾಗಬಹುದು.
ಪರೀಕ್ಷಾ ವೇಳಾಪಟ್ಟಿ ಹೀಗಿದೆ
ಮೇ15- ಗಣಿತ
ಮೇ16 - ಇಂಗ್ಲಿಷ್
ಮೇ18- ವಿಜ್ಞಾನ
ಮೇ19- ಐಚ್ಛಿಕ ಭಾಷಾ ವಿಷಯ
ಮೇ20- ಸಂಸ್ಕೃತ/ಮಾಹಿತಿ ತಂತ್ರಜ್ಞಾನ
ಮೇ21- ಸಮಾಜ ವಿಜ್ಞಾನ

