ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನಕ್ಕಾಗಿ, ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಚುನಾವಣಾ ಸಾಮಗ್ರಿಗಳೊಂದಿಗೆ ತಮ್ಮ ಮತಗಟ್ಟೆಗಳಿಗೆ ಹೆಜ್ಜೆಹಾಕಿದರು. ಬೆಳಗ್ಗೆ 7 ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಆರು ಗಂಟೆ ವರೆಗೆ ಸರತಿಸಾಲಲ್ಲಿ ನಿಂgತಿರುವವರಿಗೆ ಟೋಕನ್ ನೀಡಿ, ಇವರಿಗೆ ಮತ ಚಲಾಯಿಸಲುಅವಕಾಶ ಕಲ್ಪಿಸಲಾಗುತ್ತಿದೆ.
ಜಿಲ್ಲೆಯ ಮೂರು ಕೇಂದ್ರಗಳಿಂದ ಚುನಾವಣಾ ಸಾಮಗ್ರಿಗಳ ವಿತರಣಾ ಕಾರ್ಯ ಬುಧವರ ಬೆಳಗ್ಗೆ 8ಕ್ಕೆ ಆರಂಭಗೊಂಡಿತ್ತು. ಈ ಬಾರಿ ಎಲ್ಲಾ ಮತಗಟ್ಟೆಯ ಒಳಗೆ ಮತ್ತು ಹೊರಗೆ ಕ್ಯಾಮೆರಾಗಳೊಂದಿಗೆ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ.ಜಿಲ್ಲೆಯಲ್ಲಿ ಐದು ಪಿಂಕ್ ಮತಗಟ್ಟೆಗಳಿದ್ದು, ಅವುಗಳಲ್ಲಿ ಕೇವಲ ಮಹಿಳಾ ಮತಗಟ್ಟೆ ಅಧಿಕಾರಿಗಳು ಮತ್ತು ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ ಇರಲಿದೆ.
ಜಿಲ್ಲೆಯ ಒಟ್ಟು11,03,618 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ 230113, ಕಾಸರಗೋಡು ಕ್ಷೇತ್ರದಲ್ಲಿ 210923, ಉದುಮ ಕ್ಷೇತ್ರದಲ್ಲಿ 228512, ಕಾಞಂಗಾಡಿನಲ್ಲಿ 223980 ಹಗೂ ತ್ರಿಕರಿಪುರ ಕ್ಷೇತ್ರದಲ್ಲಿ 210090ಮಂದಿ ಮತದಾರಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 32 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಜ್ಯದ 140ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 30495 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.
ಕಾಸರಗೋಡು ಸರ್ಕಾರಿ ಕಾಲೇಜು ವಠಾರದಲ್ಲಿ ಮತದಾನ ಸಾಂಗ್ರಿಗಳ ಬಗ್ಗೆ ಖಚಿತಪಡಿಸಿಕೊಳ್ಳುತ್ತಿರುವ ಸಿಬ್ಬಂದಿ


