ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ಮತ್ತು ಕೊಟ್ಟಕ್ಕಲ್ ವೈದ್ಯರತ್ನಂ ಪಿ.ಎಸ್. ವಾರಿಯರ್ ಆಯುರ್ವೇದ ಕಾಲೇಜು ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಎಂಒಯುಗೆ ಸಹಿ ಹಾಕಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪೆÇ್ರ.ವಿ.ಬಿ. ಸಮೀರ್ ಕುಮಾರ್ ಹಾಗೂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಬಿಂದು ಕೆ.ಕೆ.ಎರಡೂ ಸಂಸ್ಥೆಗಳು ಭೌತಿಕ ವಿಜ್ಞಾನ, ಸಾರ್ವಜನಿಕ ಆರೋಗ್ಯ, ಜೀವ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಯೋಜನೆಗಳಲ್ಲಿ ಸಹಕರಿಸುವ ನಿಟ್ಟಿನಲ್ಲಿ ಒ¥ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ ಮತ್ತು ಭೌತಿಕ ವಿಜ್ಞಾನ ಶಾಲೆಯ ಡೀನ್ ಪೆÇ್ರ.ಎ. ಶಕ್ತಿವೇಲ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ಆರ್. ರಾಜೇಶ್, ಶಿಕ್ಷಕರಾದ ಪೆÇ್ರ. ಜಯಸುಧಾ ಜೆ.ಎಸ್., ಡಾ. ವಿ. ಕುಮಾರ್, ಕಾಲೇಜು ಉಪ ಪ್ರಾಂಶುಪಾಲ ಡಾ. ಮನೋಜ್ ಕುಮಾರ್ ಎನ್, ಆಸ್ಪತ್ರೆ ಅಧೀಕ್ಷಕ ಡಾ. ಬೆನಿಲ್ ಬಿ.ಬಿ. ಉಪಸ್ಥಿತರಿದ್ದರು.



