HEALTH TIPS

ಕೆಲವೇ ದಿನಗಳಲ್ಲಿ ಹಣ ದುಪ್ಪಟ್ಟು ಮಾಡುವ ಆಸೆ; ₹ 12 ಕೋಟಿ ಕಳೆದುಕೊಂಡ ವೈದ್ಯ!

 ಪುಣೆ: ಕೇವಲ 11 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿದ್ದ ಸೈಬರ್ ವಂಚಕರು ಇಲ್ಲಿನ 75 ವರ್ಷದ ಹಿರಿಯ ವೈದ್ಯರೊಬ್ಬರಿಗೆ ಬರೋಬ್ಬರಿ ₹ 12.31 ಕೋಟಿ ವಂಚಿಸಿದ್ದಾರೆ. 


ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭಗಳಿಸಬಹುದು ಎಂಬ ಆಮಿಷಕ್ಕೆ ಒಳಗಾದ ವೈದ್ಯರು ಇದೀಗ ಹಣವನ್ನು ಕಳೆದುಕೊಂಡು ಕಂಗಲಾಗಿದ್ದಾರೆ.

ವೈದ್ಯರು ನೀಡಿದ ದೂರಿನ ಮೇರೆಗೆ ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಈIಖ) ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಕಳೆದ ಜನವರಿಯಲ್ಲಿ ಸಂತ್ರಸ್ತ ವೈದ್ಯರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆಯಪ್ ಸಂದೇಶ ಬಂದಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಅದರಲ್ಲಿ ತಿಳಿಸಲಾಗಿತ್ತು. ವೈದ್ಯರು ಇದಕ್ಕೆ ಆಸಕ್ತಿ ತೋರಿಸಿದ ತಕ್ಷಣ, ವಂಚಕರು ವೈದ್ಯರನ್ನು ಸಂಪರ್ಕ ಮಾಡಿದ್ದರು.

11 ದಿನಗಳಲ್ಲಿ ಹೂಡಿಕೆ ಮಾಡಿದರೆ ₹ 54 ಕೋಟಿ ಲಾಭ ಬರುತ್ತದೆ ಎಂದು ನಂಬಿಸಿದ್ದರು. ಅಂತರರಾಷ್ಟ್ರೀಯ ಹೂಡಿಕೆ ಸಂಸ್ಥೆಯ ಹೆಸರನ್ನೇ ಹೋಲುವ ನಕಲಿ 'ಟ್ರೇಡಿಂಗ್ ಆಯಪ್' ಒಂದನ್ನು ಡೌನ್‌ಲೋಡ್ ಮಾಡುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಆ ಆಯಪ್‌ನಲ್ಲಿ ವೈದ್ಯರು ಹೂಡಿಕೆ ಮಾಡಿದ ಹಣ ಮತ್ತು ಅದಕ್ಕೆ ಬರುತ್ತಿರುವ ಲಾಭ ಎಲ್ಲವೂ ನೈಜವಾಗಿರುವಂತೆ ತೋರಿಸಲಾಗಿತ್ತು. ಇದನ್ನು ನಂಬಿದ ವೈದ್ಯರು ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು.

ವೈದ್ಯರು ಒಟ್ಟು 8 ಬಾರಿ ವಿವಿಧ ಬ್ಯಾಂಕ್ ಖಾತೆಗಳಿಗೆ 12.31 ಕೋಟಿ ವರ್ಗಾಯಿಸಿದ್ದರು. ಮೂರು ತಿಂಗಳ ಕಾಲ ಸತತವಾಗಿ ಹಣ ಹೂಡಿಕೆ ಮಾಡಿದರೂ ಒಂದು ರೂಪಾಯಿ ಕೂಡ ವಾಪಸ್ ಬಂದಿರಲಿಲ್ಲ. ವಂಚಕರು ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ತಾನು ಮೋಸ ಹೋಗಿರುವುದು ವೈದ್ಯರಿಗೆ ಗೊತ್ತಾಗಿ ತಕ್ಷಣ ಅವರು ಸೈಬರ್ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ವೈದ್ಯರು ಹಣ ಹೂಡಿಕೆ ಮಾಡಲು ಹಿಂಜರಿದಾಗ, ವಂಚಕರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈ ಭಯದಿಂದ ವೈದ್ಯರು ಮತ್ತಷ್ಟು ಹಣವನ್ನು ವರ್ಗಾಯಿಸುತ್ತಲೇ ಹೋದರು ಎಂದು ಪೊಲೀಸರು ಘಟನೆ ಸಂಬಂಧ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries