ಬೈರೂತ್: 'ಮುಂದಿನ ಮಂಗಳವಾರದ ವೇಳೆಗೆ ಲೆಬನಾನ್ ಹಾಗೂ ಇಸ್ರೇಲ್ ನೇರ ಮಾತುಕತೆ ನಡೆಸಲಿದೆ' ಎಂದು ಲೆಬನಾನ್‌ನ ಅಧ್ಯಕ್ಷ ಜೋಸೆಫ್ ಔನ್ ಹೇಳಿಕೆ ನೀಡಿದ್ದಾರೆ.
ಸಭೆಯ ಮಾತುಕತೆಯ ನಿಯಮದ ಕುರಿತಾಗಿ ಲೆಬನಾನ್‌ನಲ್ಲಿರುವ ವಾಷಿಂಗ್ಟನ್‌ನಲ್ಲಿ ರಾಯಭಾರ ಕಚೇರಿಗೆ ಉಭಯ ರಾಷ್ಟ್ರಗಳ ರಾಯಭಾರಿಗಳು ದೂರವಾಣಿ ಕರೆ ಮಾಡಿದ ಬಳಿಕ ಔನ್ ಕಚೇರಿಯಿಂದ ಈ ಹೇಳಿಕೆ ಹೊರಬಿದ್ದಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿದೆ.
ಇಸ್ರೇಲ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಬೈರೂತ್ ನೇರ ಮಾತುಕತೆಗೆ ಮುಂದಾಗಿದೆ. ಆದರೆ, ಇರಾನ್ ಜೊತೆಗೆ ಅಮೆರಿಕವು ನಡೆಸುತ್ತಿರುವ ಕದನ ವಿರಾಮದಂತೆ ಸಂಧಾನ ಏರ್ಪಡುವ ಸಾಧ್ಯತೆಯಿದೆ.
ಲೆಬನಾನ್‌ನ ಕೋರಿಕೆಯ ಮೇರೆಗೆ ನೇರ ಮಾತುಕತೆಗೆ ಅನುಮತಿ ನೀಡಲಾಗಿದೆ ಎಂದು ಇಸ್ರೇಲ್ ಗುರುವಾರ ಘೋಷಿಸಿತ್ತು. ಆದರೆ ಈ ಕುರಿತಂತೆ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.
ಈ ಬೆಳವಣಿಗೆಯ ಕುರಿತಂತೆ ಹಿಜ್ಬುಲ್ಲಾ ಕೂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಸ್ರೇಲ್ ಜೊತೆಗಿನ ನೇರ ಮಾತುಕತೆಯನ್ನು ಸ್ಪಷ್ಟವಾಗಿ ವಿರೋಧಿಸಿದೆ.
ಕಳೆದ 40 ದಿನಗಳಿಂದ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ವಾಯುದಾಳಿ ನಡೆಸುತ್ತಿದ್ದು, 1,900 ಮಂದಿ ಮೃತಪಟ್ಟು, 10 ಲಕ್ಷ ಮಂದಿ ನಿರ್ವಸಿತಗರಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

