ಪತ್ತನಂತಿಟ್ಟ: ಸಾವಿರಾರು ಜನರು ಶಬರಿಮಲೆಗೆ ಭೇಟಿ ನೀಡಿ ವಿಷು ಮೇಷಮಾಸ ದರ್ಶನದ ನಂತರ ಆಶೀರ್ವಾದ ಪಡೆದರು. ಬುಧವಾರ ಮುಂಜಾನೆ 4ಕ್ಕೆ ಗರ್ಭಗೃಹದ ಬಾಗಿಲು ತೆರೆಯಲಾಯಿತು. ವಿಷು ಕಣಿ ದರ್ಶನಕ್ಕೆ ಬೆಳಗಿನ ಜಾವ 4.05 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅಭಿಷೇಕ, ಉಷಃಪೂಜೆ ಮತ್ತು ತುಪ್ಪದ ಅಭಿಷೇಕ ನಡೆಯಿತು.
17 ರಂದು ಸಹಸ್ರ ಕಲಶ ಪೂಜೆ ಮತ್ತು 18 ರಂದು ಸಹಸ್ರ ಕಲಶ ಅಭಿಷೇಕ ನಡೆಯಲಿದೆ. ವಿಷು ಮೇಷಮಾಸ ಪೂಜೆ ಪೂರ್ಣಗೊಂಡಿದ್ದು, ಶನಿವಾರ ರಾತ್ರಿ 10ಕ್ಕೆ ಗಭಗೃಹ ಮುಚ್ಚಲಾಗುವುದು. ಮೇಷಮಾಸ ಪೂಜೆಗಳಿಗೆ ಸಂಬಂಧಿಸಿದಂತೆ ದರ್ಶನ ಪಡೆಯಲು ಬರುವವರು ವರ್ಚುವಲ್ ಕ್ಯೂ ವೆಬ್‍ಸೈಟ್ (www.sabarimalaonline.org) ಮೂಲಕ ದರ್ಶನಕ್ಕಾಗಿ ಸ್ಲಾಟ್ ಪಡೆದುಕೊಳ್ಳಬೇಕು.

