ರಾಂಚಿ: ಪಾನಿಪುರಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪಾನಿಪುರಿಯನ್ನು ಇಷ್ಟಪಟ್ಟು ತಿನ್ನುವವರಿದ್ದಾರೆ. ಆದರೆ ಇದೇ ಪಾನಿಪುರಿ ತಿಂದು ಬಾಲಕ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ನಡೆದಿದೆ.
ರಸ್ತೆ ಬದಿ ಪಾನಿಪುರಿ ಸೇವಿಸಿದ ನಂತರ ಮನೆಗೆ ಹೀಗಿದ್ದ ಕೆಲವರಿಗೆ ತೀವ್ರ ಜ್ವರ, ಹೊಟ್ಟೆನೋವು, ವಾಂತಿ ಶುರುವಾಗಿದೆ.
ಆ ಕೂಡಲೇ ಅಸ್ವಸ್ಥರಾಗಿದ್ದ 18 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದ ಪಾನಿಪುರಿ ಮಾರಾಟಗಾರ ನಾಪತ್ತೆಯಾಗಿದ್ದಾರೆ.
ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವು!ಬಿಸಲಬ್ಬರಕ್ಕೆ ಜೀವತೆತ್ತ ಶಿಕ್ಷಕರು; ಜನಗಣತಿಯಲ್ಲಿದ್ದಾಗಲೇ ತಾಪ ತಾಳದೇ ಸಾವು
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಗ್ರಾಮಸ್ಥರ ಪ್ರಕಾರ, ಅವರೆಲ್ಲರೂ ಒಂದೇ ವ್ಯಕ್ತಿಯ ಬಳಿ ಪಾನಿಪುರಿ ಸೇವಿಸಿದ್ದಾರೆ. ಶನಿವಾರ ರಾತ್ರಿಯ ವೇಳೆಗೆ ಅನೇಕರು ಅನಾರೋಗ್ಯಕ್ಕಿಡಾಗಿದ್ದು, ಭಾನುವಾರದ ವೇಳೆಗೆ ಜ್ವರ ಹಾಗೂ ಹೊಟ್ಟೆನೋವು ತೀವ್ರಗೊಂಡಿದೆ.
ಘಟನೆಯ ಬಳಿಕ ಸ್ಥಳೀಯ ಪೊಲೀಸರು ಹಾಗೂ ಆಡಳಿತ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿವಿಲ್ ಸರ್ಜನ್ ಡಾ ಬಚ್ಛಾ ಪ್ರಸಾದ್ ಸಿಂಗ್, ಪಾನಿಪುರಿ ಸೇವಿಸಿದ ಬಳಿಕ 18 ಜನ ಅನಾರೋಗ್ಯಕ್ಕೀಡಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯ ನಿಜವಾದ ಕಾರಣ ಏನು ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಹೇಳಿದರು.

