HEALTH TIPS

ಮಧ್ಯಪ್ರಾಚ್ಯ ಸಂಘರ್ಷ| 2 ರಿಂದ 3 ವಾರಗಳಲ್ಲಿ ಯುದ್ಧ ಕೊನೆಗೊಳಿಸುವ ಸುಳಿವು ನೀಡಿದ ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಕಷ್ಠ ಸೃಷ್ಟಿಸಿರುವ ಇರಾನ್ ಯುದ್ಧವನ್ನು ಇನ್ನು 2 ರಿಂದ 3 ವಾರಗಳಲ್ಲಿ ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ ಒಂದು ತಿಂಗಳಷ್ಟು ದೀರ್ಘಕಾಲದ ಯುದ್ಧವನ್ನು ಆದಷ್ಟೇ ಶೀಘ್ರದಲ್ಲೇ ಮುಕ್ತಾಯಗೊಳಿಸುವ ಸೂಚನೆ ನೀಡಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, "ನಾವು ಶೀಘ್ರದಲ್ಲೇ ಇರಾನ್ ತೊರೆಯಲಿದ್ದೇವೆ. ಇದು ಇನ್ನೆರಡು ವಾರಗಳಲ್ಲಿ ನಡೆಯಬಹುದು, ಇಲ್ಲವೆ ಮೂರು ವಾರಗಳಲ್ಲಿ ನಡೆಯಬಹುದು" ಎಂದು ಹೇಳಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಹೇಳಿಕೆಯ ಮೂಲಕ, ಅಮೆರಿಕ ತನ್ನ ಸೇನಾ ಕಾರ್ಯಾಚರಣೆಯನ್ನು ಶೀಘ್ರವಾಗಿ ಅಂತ್ಯಗೊಳಿಸಲಿದೆ ಎಂದು ಟ್ರಂಪ್‌ ಸುಳಿವು ನೀಡಿದ್ದಾರೆ.

ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕಕ್ಕೆ ಇರಾನ್ ನೊಂದಿಗೆ ರಾಜತಾಂತ್ರಿಕ ಒಪ್ಪಂದದ ಅಗತ್ಯವಿಲ್ಲ ಎಂದು ಡೊನಾ‍ಲ್ಡ್ ಟ್ರಂಪ್ ಹೇಳಿದ್ದಾರೆ. "ಈಗ ಇರಾನ್ ಒಪ್ಪಂದ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಇರಾನ್ ನ ಅಣ್ವಸ್ತ್ರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕುಗ್ಗಿಸುವವರೆಗೆ ಸೇನಾ ಕಾರ್ಯಾಚರಣೆ ಕೊನೆಯಾಗುವುದಿಲ್ಲ. ಆಗ ನಾವು ಇರಾನ್ ತೊರೆಯಲಿದ್ದೇವೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries