ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕದನ ವಿರಾಮದ ಭಾಗವಾಗಿ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗಿದೆ.
ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಕದನ ವಿರಾಮವು ಜಲಸಂಧಿಯನ್ನು ಮತ್ತೆ ತೆರೆಯಲು ಅನುವು ಮಾಡಿಕೊಟ್ಟಿದೆ, ಯುದ್ಧ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಮುಕ್ತವಾಗಿ ಜಲಸಂಧಿ ತೆರೆದಿತ್ತು ಅಲ್ಲವೇ. ಈ 39 ದಿನಗಳ ಯುದ್ಧದಲ್ಲಿ ಅಮೆರಿಕಾ ನಿಖರವಾಗಿ ಏನು ಸಾಧಿಸಿತು? ಇದೊಂದು ಅನ್ಯಾಯದ ಯುದ್ಧ ಎಂದು ಒಮರ್ ಅಬ್ದುಲ್ಲಾ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಏಷ್ಯಾವನ್ನು ನಾಶ ಮಾಡಿ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದ ನಂತರ ಇರಾನ್, ಅಮೆರಿಕ ಮತ್ತು ಇಸ್ರೇಲ್ ಬುಧವಾರ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿವೆ.

