ಜಮ್ಮು: ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 3ರಂದು ಆರಂಭವಾಗಿ, ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ ಎಂದು ಜಮ್ಮುಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತಿಳಿಸಿದ್ದಾರೆ.
'13ರಿಂದ 70 ವರ್ಷದೊಳಗಿನ ಯಾತ್ರಿಕರು ಯಾತ್ರೆ ಕೈಗೊಳ್ಳಬಹುದು.
ಯಾತ್ರೆಗೆ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ನೋಂದಣಿ ಏಪ್ರಿಲ್ 15ರಿಂದ ಆರಂಭವಾಗಲಿದೆ' ಎಂದು ಸಿನ್ಹಾ ಅವರು ಲೋಕಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾತ್ರೆಯ ದಿನಾಂಕವನ್ನು ನಿರ್ಧರಿಸಲಾಗಿದೆ.

