ಕುಂಬಳೆ: ಕಾಸರಗೋಡಿಗೆ ಕಾಳಧನ ಸಾಗಾಟ ತೀವ್ರಗೊಂಡಿದೆ. ಬುಧವಾರ ಎರಡು ಬಾರಿಯಾಗಿ ಕಾಸರಗೋಡು ಹಾಗೂ ಕುಂಬಳೆಯಿಂದ ಒಟ್ಟು 72.9 ಲಕ್ಷ ರೂಪಾಯಿಯನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ 61.5 ಲಕ್ಷ ರೂಪಾಯಿಗಳನ್ನು ಕುಂಬಳೆಯಿಂದ ವಶಪಡಿಸಲಾಗಿದೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಕಾಸರಗೋಡು ತಳಂಗರೆಯ ಮಡನ್ನೂರ್ ಹೌಸ್‍ನ ಶಬೀರ್ ಎಂಬಾತ ಬಂಧಿತ ವ್ಯಕ್ತಿಯೆಂದು ಪೋಲೀಸರು ತಿಳಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್ ಹಾಗೂ ಕುಂಬಳೆ ಪೋಲೀಸರು ಆರಿಕ್ಕಾಡಿ ಟೋಲ್ ಬೂತ್ ಸಮೀಪ ನಡೆಸಿದ ವಾಹನ ತಪಾಸಣೆ ವೇಳೆ ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಲಾಗಿದೆ. ಕಾರಿನ ಹ್ಯಾಂಡ್ ಬ್ರೇಕ್‍ನ ಭಾಗದಲ್ಲಿ ಹಣವನ್ನು ಬಚ್ಚಿಡಲಾಗಿದ್ದು. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಕಾರಿನಿಂದ ಹಣವನ್ನು ವಶಪಡಿಸಲಾಗಿದೆ.

.jpg)
