ಬದಿಯಡ್ಕ: ವಿಕಸಿತ ಕೇರಳ ಸೃಷ್ಟಿಗೆ ಬಿಜೆಪಿ ಸಂಪೂರ್ಣ ಸಜ್ಜಾಗಿದೆ ಎಂಬುದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯೇ ಸಾಕ್ಷಿ ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್. ಡಿ. ಎ ಅಭ್ಯರ್ಥಿ ಎಂ. ಎಲ್. ಅಶ್ವಿನಿ ನುಡಿದರು.
ಕುಂಬ್ಡಾಜೆ ಗ್ರಾಮಪಂಚಾಯಿತಿನ ಗಾಡಿಗುಡ್ಡೆಯಲ್ಲಿ ನಡೆದ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಸಿತ ಕೇರಳ ಪ್ರಣಾಳಿಕೆಯಲ್ಲಿ ತಿಂಗಳಿಗೆ 3 ಸಾವಿರ ರೂ ಕ್ಷೇಮ ಪಿಂಚಣಿ, ಪ್ರತಿ ತಿಂಗಳು 2500 ರೂ. ಗಳ ಇರೋಗ್ಯ-ಭಕ್ಷ್ಯ ಸುರಕ್ಷಾ ಕಾರ್ಡ್ ಒದಗಿಸಲಾಗುವುದೆಂದೂ, ಎಲ್ಲಾ ಕೇರಳೀಯರಿಗೂ ಆಯುಷ್ಮಾನ್ ಭಾರತ್ ರಕ್ಷಣಾ ಸೌಲಭ್ಯ ಸಹಿತ ಬಡ ಕುಟುಂಬಗಳಿಗೆ ನೆಮ್ಮದಿಯ ಬದುಕಿಗೆ ಪೂರಕವಾದ ಭರವಸೆಗಳಿವೆ. ಆದ್ದರಿಂದ ಕೇರಳದ ಬದಲಾವಣೆಗೆ ಎನ್‍ಡಿಎ ಗೆಲ್ಲಿಸಿ ಎಂದು ಅಶ್ವಿನಿ ಕರೆ ನೀಡಿದರು.
ಬೂತ್ ಅಧ್ಯಕ್ಷ ದಯಾನಂದ ರೈ ಅಧ್ಯಕ್ಷತೆ ವಹಿಸಿದರು. ಕುಂಬ್ಡಾಜೆ ಪಂ. ಬಿಜೆಪಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಗ್ರಾ. ಪಂ. ಅಧ್ಯಕ್ಷೆ ಎನ್. ಯಶೋಧ, ಉಪಾಧ್ಯಕ್ಷ ದಾಮೋದರ, ಕಾರಡ್ಕ ಪಂ ಅಧ್ಯಕ್ಷೆ ಎಂ. ಜನನಿ, ಜನಪ್ರತಿನಿಧಿಗಳಾದ ರವೀಂದ್ರ ರೈ ಗೋಸಾಡ, ಕೊರಗಪ್ಪ, ಚಿದಾನಂದ ರೈ, ರಾಜೇಶ ಶೆಟ್ಟಿ ಮೊದಲಾದವರು ಮಾತಾಡಿದರು.

.jpg)
.jpg)
