ಕುಂಬಳೆ: ಇಚ್ಲಂಗೋಡು ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ವೇಳೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಲಾರಿಯನ್ನು ಉಪೇಕ್ಷಿಸಿ ಚಾಲಕ ಸಹಿತ ಹಲವರು ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲೀಸರು ಲಾರಿ ಚಾಲಕ, ಹೊಯ್ಗೆ ಸಂಗ್ರಹಿಸಿಟ್ಟಿದ್ದ ಸ್ಥಳದ ಮಾಲಕ ಹಾಗೂ ಹೊಯ್ಗೆ ಸಂಗ್ರಹಗಾರರ ಸಹಿತ 7 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಲಾರಿ ಹಾಗೂ ಹೊಯ್ಗೆ ಸೋಸುವ ಯಂತ್ರವನ್ನು ವಶಕ್ಕೆ ತೆಗೆಯಲಾಗಿದೆ. ಆರೋಪಿಗಳ ವಿರುದ್ಧ ಕಳವು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್‍ಐ ಅನಂತಕೃಷ್ಣನ್ ಆರ್. ಮೆನೋನ್ ತಿಳಿಸಿದ್ದಾರೆ. ಇಚ್ಲಂಗೋಡು ಹೊಳೆಯಿಂದ ಹೊಯ್ಗೆ ಸಾಗಾಟ ವ್ಯಾಪಕಗೊಂಡಿರುವುದಾಗಿ ಲಭಿಸಿದ ಮಾಹಿತಿಯಂತೆ ಪೋಲೀಸರು ಅಲ್ಲಿಗೆ ತಲುಪಿದ್ದರು. ಪೋಲೀಸರನ್ನು ಕಂಡು ಲಾರಿ ಚಾಲಕ ಸಹಿತ ಇತರರು ಓಡಿ ಪರಾರಿಯಾಗಿದ್ದಾರೆ.

.jpg)
