HEALTH TIPS

ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11.40 ಲಕ್ಷ ರೂ. ಪತ್ತೆ: ಕಣ್ಣೂರು ನಿವಾಸಿ ಕಸ್ಟಡಿಗೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಪೋಲೀಸರು ಬುಧವಾರ ಮುಂಜಾನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11,40,000 ರೂ. ನಗದು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಅಳಿಕ್ಕಲ್ ಪಾದಿರಾಪರಂ ಬಿಲ್‍ಪಾರಯಿಲ್ ನಿವಾಸಿ ಅನೂಪ್ (37) ಎಂಬವರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡು ಆತನ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. 


ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಟ್ರಾಫಿಕ್ ಜಂಕ್ಷನ್ ನಲ್ಲಿ ಕಾಸರಗೋಡು ಪೋಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಬರುತ್ತಿದ್ದ ಕಣ್ಣೂರು ಜಿಲ್ಲೆ  ನೋಂದಾಯಿತ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಈ ನಗದು ಪತ್ತೆಹಚ್ಚಿ ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲ್ಲಿದ್ದ ಅನೂಪ್ ನ್ನು ಪೋಲೀಸರು ಕಸ್ಟಡಿಗೆ ತೆಗೆದು ವಿಚಾರಿಸಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಶಪಡಿಸಿದ ಹಣವನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದಕ್ಕೆ ಸಂಬಂಧಿಸಿದ ಸರಿಯಾದ ದಾಖಲು ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ಈ ಹಣ ಅದರ ವಾರಿಸುದಾರನಿಗೆ ಲಭಿಸಲಿದೆಯೆಂದೂ ಇಲ್ಲವಾದಲ್ಲಿ ಅದು ಸರ್ಕಾರಿ ಖಜಾನೆಗೆ ಸೇರಲಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎನ್‍ಪೋರ್ಸ್ ಮೆಂಟ್ ವಿಭಾಗವೂ ತನಿಖೆ ನಡೆಸುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries