ಚಂಡೀಗಢ: ಇಲ್ಲಿನ ಬಿಜೆಪಿ ಪಂಜಾಬ್ ರಾಜ್ಯ ಘಟಕದ ಕಚೇರಿ ಹೊರಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
'ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗ ಮತ್ತು ಚಂಡೀಗಢ ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಐವರನ್ನು ಬಂಧಿಸಿ, ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಗುರುತಿಸಲಾಗಿದೆ' ಎಂದು 'ಎಕ್ಸ್'ನಲ್ಲಿ ಶನಿವಾರ ತಿಳಿಸಿದ್ದಾರೆ.
'ಸಂಚಿನ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಪಾತ್ರ ಇದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೋರ್ಚುಗಲ್ ಮತ್ತು ಜರ್ಮನಿಯಲ್ಲಿರುವ ವಿದೇಶಿ ಹ್ಯಾಂಡ್ಲರ್‌ಗಳನ್ನು ಗುರುತಿಸಲಾಗಿದೆ' ಎಂದು ಹೇಳಿದ್ದಾರೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಬಿಜೆಪಿಯ ಕಚೇರಿಯ ಹೊರಗೆ ಸ್ಫೋಟ ನಡೆದಿತ್ತು.

