HEALTH TIPS

ಮಾಲಿಯಲ್ಲಿ ರಕ್ಷಣಾ ಸಚಿವ ಕಾಮಾರಾ ಹತ್ಯೆ

ಮಾಲಿ: ಆಫ್ರಿಕನ್ ರಾಷ್ಟ್ರವಾದ ಮಾಲಿಯಲ್ಲಿ ರವಿವಾರ ಬಂಡುಕೋರರ ದಾಳಿಯಲ್ಲಿ ರಕ್ಷಣಾ ಸಚಿವ ಜನರಲ್ ಸಾದಿಯೊ ಕಾಮಾರಾ ಅವರ ಹತ್ಯೆಯಾಗಿದೆ. ಕಾಮರಾ ಅವರ ನಿವಾಸವಿರುವ ಕಾಟಿ ನಗರದ ಮೇಲೆ ಅಲ್ಖಾಯಿದಾ ಬೆಂಬಲಿಗರು ಹಾಗೂ ತುರಾರೆಂಗ್ ಬಂಡುಕೋರರು ಸಂಯೋಜಿತ ದಾಳಿ ನಡೆಸಿದ ಮರುದಿನ ಈ ಘಟನೆ ನಡೆದಿದೆ. 


ರಾಜಧಾನಿ ಬಾಮಾಕೊದ ಸಮೀಪದಲ್ಲಿರುವ ಬಿಗುಭದ್ರತೆಯ ದಂಡುಪ್ರದೇಶವಾದ ಕಾಟಿಯಲ್ಲಿರುವ ಕಾಮರಾ ಅವರ ನಿವಾಸಕ್ಕೆ ಬಂಡುಕೋರರು ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆಸಿದ್ದಾರೆಂದು aljazeera.com ವರದಿ ತಿಳಿಸಿದೆ.

ಅಲ್ಖಾಯಿದಾ ಜೊತೆ ನಂಟು ಹೊಂದಿರುವ ಜಮಾಅತ್ ನುಸ್ರತ್ ಅಲ್ ಇಸ್ಲಾಂ (ಜೆಎನ್‌ಐಎಂ) ಹಾಗೂ ಅಝವಾದ್ ಲಿಬರೇಶನ್ ಫ್ರಂಟ್ (ಎಫ್‌ಎಲ್‌ಎ), ಮಾಲಿಯ ಅತ್ಯಂತ ಬಿಗುಭದ್ರತೆಯ ಸ್ಥಳಗಳಲ್ಲೊಂದಾದ ಕಾಟಿಯ ಮೇಲೆ ದಾಳಿ ನಡೆಸಿದೆ ಎಂದು ಅದು ತಿಳಿಸಿದೆ. ಇದೇ ಪ್ರದೇಶದಲ್ಲಿ ವಾಸವಾಗಿರುವ ಮಾಲಿಯ ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೊಯ್ಟಾ ಜೀವಂತವಾಗಿದ್ದು, ಸುರಕ್ಷಿತ ಪ್ರದೇಶದಲ್ಲಿ ಇದ್ದಾರೆಂದು ವರದಿ ತಿಳಿಸಿದೆ. 







ಬಂಡುಕೋರರು ಬಾಮಾಕೋ ಸೇರಿದಂತೆ ಮಾಲಿಯಾದ್ಯಂತ ಹಲವೆಡೆ ದಾಳಿ ನಡೆಸಿದ್ದಾರೆ. ಕಿಡಾಲ್ ನಗರದಲ್ಲಿ ಸೇನಾಪಡೆಗಳು ಹಾಗೂ ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಭಾರೀ ಸ್ಫೋಟದ ಸದ್ದುಗಳು ಕೇಳಿಬಂದಿವೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries