HEALTH TIPS

ಶ್ವೇತಭವನದ ವರದಿಗಾರರ ಭೋಜನ ಕೂಟದ ದಾಳಿಯ ಶಂಕಿತ ಆರೋಪಿ ಕೋಲ್ ಥಾಮಸ್ ಅಲೆನ್ ಯಾರು?

ವಾಶಿಂಗ್ಟನ್  :ಅಮೆರಿಕದ ವಾಶಿಂಗ್ಟನ್ DCಯಲ್ಲಿರುವ ಶ್ವೇತಭವನದ ವರದಿಗಾರರ ಸಂಘದ ಭೋಜನ ಕೂಟದಲ್ಲಿ ಶನಿವಾರ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಶಂಕಿತ ದಾಳಿಕೋರ ಕೋಲ್ ಥಾಮಸ್ ಅಲೆನ್ ನನ್ನು ಕಾನೂನು ಜಾರಿ ಸಿಬ್ಬಂದಿ ಬಂಧಿಸಿದ್ದಾರೆ. ಶನಿವಾರ ರಾತ್ರಿ ಸ್ಥಳದಲ್ಲಿ ಗುಂಡಿನ ಸದ್ದು ಕೇಳಿಬಂದ ನಂತರ ಅಮೆರಿಕದ ಅಧ್ಯಕ್ಷ ಅವರನ್ನು ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನ ಕೂಟದಿಂದ ಸ್ಥಳಾಂತರಿಸಲಾಯಿತು. 


ಬಂಧಿಸಲಾಗಿರುವ ವ್ಯಕ್ತಿ ಕ್ಯಾಲಿಫೋರ್ನಿಯಾದವನು ಎಂದು ಹೇಳಲಾಗಿದ್ದು, ಬಂದೂಕುಗಳು ಮತ್ತು ಚಾಕುಗಳನ್ನು ಹೊತ್ತಿದ್ದು, ಒಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದಾನೆ ಎಂದು ಶಂಕಿಸಲಾಗಿದೆ. ಶಂಕಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಮಾಧ್ಯಮಗಳು ಗುರುತಿಸಿವೆ.

ಶ್ವೇತಭವನದ ವರದಿಗಾರರ ಸಂಘವು ವಾಶಿಂಗ್ಟನ್ ನ ಹೋಟೆಲ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ಭೋಜನ ಕೂಟದ ಭದ್ರತಾ ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಿದ ವ್ಯಕ್ತಿಯ ವಿಡಿಯೊ ಕ್ಲಿಪ್ ಅನ್ನು ಶ್ವೇತಭವನ ಹಂಚಿಕೊಂಡಿದೆ. ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಶಂಕಿತ ಶೂಟರ್‌ನ ಮೊದಲ ಚಿತ್ರಗಳನ್ನು ಟ್ರಂಪ್ ಬಿಡುಗಡೆ ಮಾಡಿದ್ದಾರೆ. ವರದಿಗಳ ಪ್ರಕಾರ, ಘಟನೆಯ ನಂತರ "ಕೋಲ್ ಅಲೆನ್"ನ ಲಿಂಕ್ಡ್‌ಇನ್ ಪ್ರೊಫೈಲ್ ಪರಿಶೀಲಿಸಲಾಗಿದ್ದು, ಅದರಲ್ಲಿ ಅಲೆನ್ ಲಾಸ್ ಏಂಜಲೀಸ್ ಮಹಾನಗರ ಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿ ಮತ್ತು ಗೇಮ್ ಡೆವಲಪ್ಮೆಂಟ್ ತನ್ನ ಆಸಕ್ತಿ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಅಲೆನ್ ಎಂಜಿನಿಯರ್ ಎಂಬುದು ಖಚಿತವಾಗಿದೆ.

ಶಂಕಿತ ಅಲೆನ್ ಪದವಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಕಂಪ್ಯೂಟರ್ ಸೈನ್ಸ್‌ ನಲ್ಲಿ ಪದವಿ ಪಡೆದಿದ್ದಾನೆ. ಅನುಭವದಿಂದ ಸ್ವತಂತ್ರ ಗೇಮ್ ಡೆವಲಪರ್ ಆಗಿದ್ದು, ಜೊತೆಗೆ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವವಿದೆ ಎಂದು ಲಿಂಕ್ಡಿನ್ ಪ್ರೊಫೈಲ್‌ನಲ್ಲಿ ವಿವರಿಸಲಾಗಿದೆ.

ವರದಿ ಪ್ರಕಾರ, ಅಲೆನ್ 2017ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾನೆ. ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರವೊಂದರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿ, ಡೊಮಿಂಗ್ವೆಜ್ ಹಿಲ್ಸ್‌ನಿಂದ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ ಎಂದು ಹೇಳಿರುವ ವಿವರಗಳಿವೆ.

ಆತ "ಬೋರ್ಡಮ್" ಎನ್ನುವ ಇಂಡಿ ಗೇಮ್ ಬಗ್ಗೆ ಕೂಡ ಪೋಸ್ಟ್ ಮಾಡಿದ್ದಾನೆ. ವಾಸ್ತವದಲ್ಲಿ "ಕೌಶಲ್ಯ ಆಧಾರಿತ, ಹಿಂಸೆಯಿಲ್ಲದ ಗೇಮ್" ಅನ್ನು ರಾಸಾಯನಿಕ ಮಾದರಿಯ ಆಧಾರದ ಮೇಲೆ ವಿವರಿಸಲಾಗಿದೆ ಎಂದು ಹೇಳಲಾಗಿದೆ. ಅದನ್ನು ನೈಜತೆಯಿಂದ ಆಧರಿಸಲಾಗಿದೆ ಎನ್ನುವ ವಿವರವೂ ಇದೆ. 2024ರ ಡಿಸೆಂಬರ್‌ನ ಪೋಸ್ಟ್‌ನಲ್ಲಿ ಅ2 ಎಜುಕೇಶನ್ ಎಂಬ ಪರೀಕ್ಷಾ ತಯಾರಿ ಕಂಪನಿಯು ಅಲೆನ್ ನನ್ನು "ತಿಂಗಳ ಶಿಕ್ಷಕ" ಎಂದು ಪ್ರಶಂಸಿಸಿರುವ ವಿವರಗಳಿವೆ.

ಅಲೆನ್ ಲಾಸ್ ಏಂಜಲೀಸ್ ಉಪನಗರದ ಪೆಸಿಫಿಕ್ ಲ್ಯೂಥೆರನ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದು, ವಾಲಿಬಾಲ್ ತಂಡದ ಸದಸ್ಯನಾಗಿದ್ದಾನೆ ಎಂದು ಓಃಅ ನ್ಯೂಸ್ ವರದಿ ಮಾಡಿದೆ.

ಂಈP ವರದಿಯಲ್ಲಿ ಮಾಜಿ ತಂಡದ ಸಹಪಾಠಿಯೊಬ್ಬ ಆತನನ್ನು "ಬಾರ್ಡರ್‌ಲೈನ್ ಜೀನಿಯಸ್" ಮತ್ತು "ಸೂಪರ್ ಸ್ಟೇಬಲ್" ಎಂದು ಬಣ್ಣಿಸಿದ್ದಾನೆ. "ಇತರರು ಬಹಳ ಕಷ್ಟಪಟ್ಟು ಅಧ್ಯಯನ ಮಾಡುತ್ತಾರೆ. ಅವನಿಗೆ ಓದಬೇಕೆಂದೇ ಇಲ್ಲ. ಅವನಿಗೆ ಸಹಜವಾಗಿ ಬರುತ್ತದೆ. ಅವನು ನಿಜಕ್ಕೂ ಜಾಣ" ಎಂದು ಬರೆದಿದ್ದಾನೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries